ಗುರುವಾರ , ಮೇ 19, 2022
24 °C

IPL 2022: ಆಗ 68ಕ್ಕೆ ಆಲೌಟ್, ಈಗ 67 ರನ್ ಜಯ; ಸೇಡು ತೀರಿಸಿಕೊಂಡ ಆರ್‌ಸಿಬಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಏಪ್ರಿಲ್ 23ನೇ ದಿನಾಂಕ ಆರ್‌ಸಿಬಿ ಪಾಲಿಗೆ ಕೆಟ್ಟ ದಿನವಾಗಿತ್ತು. ಅಂದು ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 68 ರನ್ನಿಗೆ ಆಲೌಟ್ ಆಗಿತ್ತು. 

ಪರಿಣಾಮ ಒಂಬತ್ತು ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಇದು ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ತಂಡವೊಂದರಿಂದ ದಾಖಲಾಗಿರುವ ಕನಿಷ್ಠ ಮೊತ್ತವಾಗಿದೆ. 

ಇದನ್ನೂ ಓದಿ: 

ಆದರೆ ಈಗ (ಮೇ.8) ಅದೇ ಎಸ್‌ಆರ್‌ಎಚ್ ವಿರುದ್ಧ 67 ರನ್ ಅಂತರದ ಗೆಲುವು ದಾಖಲಿಸಿರುವ ಆರ್‌ಸಿಬಿ, ಸೇಡು ತೀರಿಸಿಕೊಂಡಿದೆ.  

ನಾಯಕ ಫಫ್ ಡುಪ್ಲೆಸಿ ಬಿರುಸಿನ ಅರ್ಧಶತಕ (73*) ಮತ್ತು ರಜತ್ ಪಾಟಿದಾರ್ (48), ಗ್ಲೆನ್ ಮ್ಯಾಕ್ಸ್‌ವೆಲ್ (33) ಹಾಗೂ ದಿನೇಶ್ ಕಾರ್ತಿಕ್ (30*) ಉಪಯುಕ್ತ ಬ್ಯಾಟಿಂಗ್ ನರೆವಿನಿಂದ ಆರ್‌ಸಿಬಿ ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. 

ಬಳಿಕ ಸ್ಪಿನ್ನರ್ ವನಿಂದು ಹಸರಂಗ ಜಾದೂ ಮಾಡಿದರು. ಹಸರಂಗ ಐದು ವಿಕೆಟ್ ಸಾಧನೆಗೆ ನಲುಗಿದ ಹೈದರಾಬಾದ್ 19.2 ಓವರ್‌ಗಳಲ್ಲಿ 125 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 

ಇದರೊಂದಿಗೆ ಸತತ ಎರಡನೇ ಗೆಲುವು ದಾಖಲಿಸಿರುವ ಫಫ್ ಪಡೆ, ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದುವೆರೆಗೆ 12 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. 

ಅತ್ತ ಹೈದರಾಬಾದ್ ಸತತ ನಾಲ್ಕನೇ ಸೋಲಿಗೆ ಶರಣಾಗಿದೆ. ಅಲ್ಲದೆ 11 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು