ಮಂಗಳವಾರ, ಜುಲೈ 5, 2022
25 °C

ಕೊಹ್ಲಿಯನ್ನು ಹಿಂದಿಕ್ಕಿ ರೋಹಿತ್ ದಾಖಲೆ ಸರಿಗಟ್ಟಿದ ರಾಹುಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕೆ.ಎಲ್. ರಾಹುಲ್ ಆರನೇ ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯ ಬ್ಯಾಟರ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಹಿಂದಿಕ್ಕಿರುವ ರಾಹುಲ್, ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ.

ಐಪಿಎಲ್ 2022ರಲ್ಲಿ ಸೋಮವಾರ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ಅಜೇಯ ಶತಕ (103*) ಗಳಿಸಿದ್ದರು.

ಇದನ್ನೂ ಓದಿ: 

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯರು:
ರೋಹಿತ್ ಶರ್ಮಾ: 6
ಕೆ.ಎಲ್. ರಾಹುಲ್: 6
ವಿರಾಟ್ ಕೊಹ್ಲಿ: 5
ಸುರೇಶ್ ರೈನಾ: 4

ಈ ಪಟ್ಟಿಯಲ್ಲಿ ಮುನ್ನಡೆಯಲ್ಲಿರುವ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್, ಟಿ20 ಕ್ರಿಕೆಟ್‌ನಲ್ಲಿ ಒಟ್ಟು 22 ಶತಕಗಳನ್ನು ಗಳಿಸಿದ್ದಾರೆ.

 

 

 

ಐಪಿಎಲ್‌ನಲ್ಲಿ ನಾಲ್ಕನೇ ಶತಕ ಸಾಧನೆ:
ಕೆ.ಎಲ್. ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ನಾಲ್ಕನೇ ಶತಕ ಗಳಿಸಿದ್ದಾರೆ. ಈ ಮೂಲಕ ಜೋಸ್ ಬಟ್ಲರ್, ಶೇನ್ ವಾಟ್ಸನ್ ಹಾಗೂ ಡೇವಿಡ್ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

 

ಮೂರು ಶತಕಗಳು ಮುಂಬೈ ವಿರುದ್ಧವೇ ದಾಖಲಾಗಿರುವುದು ವಿಶೇಷ. ಇದು ಕೂಡ ದಾಖಲೆಯಾಗಿದೆ.

ಈ ಪೈಕಿ ಎರಡು ಶತಕಗಳು ಪ್ರಸಕ್ತ ಸಾಲಿನಲ್ಲೇ ದಾಖಲಾಗಿವೆ. ಏಪ್ರಿಲ್ 16ರಂದು ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ರಾಹುಲ್ ಅಜೇಯ ಶತಕ (103*) ಗಳಿಸಿದ್ದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳು:
ಕ್ರಿಸ್ ಗೇಲ್: 6
ವಿರಾಟ್ ಕೊಹ್ಲಿ: 5
ಜೋಸ್ ಬಟ್ಲರ್: 4
ಕೆ.ಎಲ್.ರಾಹುಲ್: 4
ಶೇನ್ ವಾಟ್ಸನ್: 4
ಡೇವಿಡ್ ವಾರ್ನರ್: 4

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು