ಐಪಿಎಲ್ ಮಿನಿ ಹರಾಜು: ಮಯಂಕ್, ಮನೀಷ್‌ಗೆ ₹1 ಕೋಟಿ ಮೂಲಬೆಲೆ

ಕೊಚ್ಚಿ: ಐಪಿಎಲ್ ಮಿನಿ ಹರಾಜು ಪಟ್ಟಿಯಲ್ಲಿರುವ ಕರ್ನಾಟಕದ ಆಟಗಾರರಲ್ಲಿ ಮಯಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ ಅವರು ತಮಗೆ ₹ 1 ಕೋಟಿ ಮೂಲ ಬೆಲೆ ನಿಗದಿಪಡಿಸಿದ್ದಾರೆ.
ರಾಜ್ಯ ರಣಜಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಕರುಣ್ ನಾಯರ್ (₹50 ಲಕ್ಷ ಮೂಲಬೆಲೆ) ಅವರ ಖರೀದಿಗೆ ಫ್ರಾಂಚೈಸ್‌ಗಳು ಮುಂದಾಗುವುದೇ ಎಂಬುದು ಕುತೂಹಲ ಮೂಡಿಸಿದೆ.
ಕರ್ನಾಟಕದ ಆಟಗಾರರಾದ ಶ್ರೇಯಸ್ ಗೋಪಾಲ್, ಮನೋಜ್ ಭಾಂಡಗೆ, ಜೆ.ಸುಚಿತ್, ಲವನೀತ್ ಸಿಸೋಡಿಯಾ, ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯಕುಮಾರ್, ಬಿ.ಆರ್.ಶರತ್, ವಿ.ಕೌಶಿಕ್ ಮತ್ತು ಶುಭಾಂಗ್ ಹೆಗ್ಡೆ ಅವರೂ ಕಣದಲ್ಲಿದ್ಧಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.