ಬುಧವಾರ, ಮಾರ್ಚ್ 29, 2023
23 °C

ಐಪಿಎಲ್‌ ಮಿನಿ ಹರಾಜು: ದಾಖಲೆ ಮೊತ್ತಕ್ಕೆ ಮಾರಾಟವಾದ ಇಂಗ್ಲೆಂಡ್ ಆಲ್‌ರೌಂಡರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೊಚ್ಚಿ: ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸಿ ₹ 18.50 ಕೋಟಿ ನೀಡಿ ಖರೀದಿಸಿದೆ.

ಇದರೊಂದಿಗೆ ಐಪಿಎಲ್‌ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಜೇಬಿಗಿಳಿಸಿಕೊಂಡ ಆಟಗಾರ ಎಂಬ ಶ್ರೇಯ ಸ್ಯಾಮ್‌ ಅವರದ್ದಾಗಿದೆ.

ಈ ಹಿಂದೆ (2021ರಲ್ಲಿ) ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಅವರನ್ನು ರಾಜಸ್ತಾನ ರಾಯಲ್ಸ್‌ ತಂಡ ₹ 16.25 ಕೋಟಿ ನೀಡಿ ಖರೀದಿಸಿತ್ತು. ಅದು ಈ ವರೆಗೆ ದಾಖಲೆಯಾಗಿತ್ತು.

ಆಸ್ಟ್ರೇಲಿಯಾದ 23 ವರ್ಷ ಆಟಗಾರ ಕೆಮರೂನ್‌ ಗ್ರೀನ್‌ ಅವರಿಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ₹ 17.50 ಕೋಟಿ ನೀಡಿದೆ. ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ₹ 16.25 ಕೋಟಿಗೆ ಖರೀದಿಸಿದೆ. ಗ್ರೀನ್‌ ಹಾಗೂ ಸ್ಟೋಕ್ಸ್‌ ಅವರಿಗೆ ₹ 2 ಕೋಟಿ ಮೂಲ ಬೆಲೆ ನಿಗದಿಯಾಗಿತ್ತು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು