ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿ ಸೋಲಿಗೆ ಮಾರ್ಮಿಕ ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿದ ಸಿಎಸ್‌ಕೆ ಆಟಗಾರ!

Published 23 ಮೇ 2024, 7:32 IST
Last Updated 23 ಮೇ 2024, 7:32 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರಬಿದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸಿರುವುದಾಗಿ ವರದಿಯಾಗಿದೆ.

ಆರ್‌ಸಿಬಿ ಸೋಲನ್ನು ಹೀಯಾಳಿಸಿ ಮಾರ್ಮಿಕ ಪೋಸ್ಟ್ ಮಾಡಿರುವ ತುಷಾರ್ ದೇಶಪಾಂಡೆ, ಬಳಿಕ ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ. ಈ ಕುರಿತು 'ಎನ್‌ಡಿಟಿವಿ' ವರದಿ ಮಾಡಿದೆ.

ಆರ್‌ಸಿಬಿಗೆ ಟಾಂಗ್ ಕೊಟ್ಟು ಸಿಎಸ್‌ಕೆ ಫ್ಯಾನ್ಸ್ ಪುಟದಲ್ಲಿ 'BENGALURU CANT' (ಆಂಗ್ಲ ಬಾಷೆಯಲ್ಲಿ ಬೆಂಗಳೂರಿನಿಂದ ಸಾಧ್ಯವಿಲ್ಲ) ಎಂಬ ಪೋಸ್ಟ್ ಹಾಕಲಾಗಿತ್ತು. ಇದನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ತುಷಾರ್ ದೇಶಪಾಂಡೆ ಹಂಚಿಕೊಂಡಿದ್ದರು ಎನ್ನಲಾಗಿದೆ.

ಒಬ್ಬ ವೃತ್ತಿಪರ ಕ್ರಿಕೆಟ್ ಆಟಗಾರನಾಗಿ ತುಷಾರ್ ಮಾಡಿರುವ ಪೋಸ್ಟ್‌ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗೆಲ್ಲಲೇಬೇಕಾದ ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ತಂಡವನ್ನು 27 ರನ್ ಅಂತರದಿಂದ ಮಣಿಸಿದ್ದ ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿತ್ತು. ಈ ಪಂದ್ಯದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಅಭಿಮಾನಿಗಳ ವಾಕ್ಸಮರ ತಾರಕಕ್ಕೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT