ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL Final | KKR vs SRH: ಕೋಲ್ಕತ್ತಗೆ 114 ರನ್ ಗುರಿ ನೀಡಿದ ಹೈದರಾಬಾದ್

Published 26 ಮೇ 2024, 14:02 IST
Last Updated 26 ಮೇ 2024, 14:02 IST
ಅಕ್ಷರ ಗಾತ್ರ

ಚೆನ್ನೈ: ಇಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್‌ಗೆ 114 ರನ್‌ಗಳ ಅತ್ಯಂತ ಸಾಧಾರಣ ಮೊತ್ತದ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡ ಕೋಲ್ಕತ್ತ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿತು. ಯಾವೊಬ್ಬ ಬ್ಯಾಟರ್ ಸಹ 30ರ ಗಡಿ ದಾಟಲಿಲ್ಲ. ಮರ್ಕರಂ 20 ಮತ್ತು ನಾಯಕ ಪ್ಯಾಟ್ ಕಮಿನ್ಸ್ ಗಳಿಸಿದ 24 ರನ್ ವೈಯಕ್ತಿಕ ಗರಿಷ್ಠ ಮೊತ್ತಗಳಾಗಿವೆ.

ಅಭಿಷೇಕ್ ಶರ್ಮಾ(2), ಟ್ರಾವಿಸ್ ಹೆಡ್(0), ರಾಹುಲ್ ತ್ರಿಪಾಠಿ(9), ನಿತೀಶ್ ರೆಡ್ಡಿ(13) ಸೇರಿದಂತೆ ಬಹುತೇಕ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು.

20 ಓವರ್‌ ಪೂರ್ಣ ಮಾಡಲು ಸಾಧ್ಯವಾಗದ ಹೈದರಾಬಾದ್ ತಂಡ 18.3 ಓವರ್‌ಗಳಿಗೆ 113 ರನ್‌ಗಳಿಗೆ ಆಲೌಟ್ ಆಯಿತು.

ಬೌಲಿಂಗ್‌ಗೆ ಅನುಕೂಲಕರವಾದ ಪಿಚ್‌ನಲ್ಲಿ ಕೋಲ್ಕತ್ತ ಬೌಲರ್‌ಗಳು ಹೈದರಾಬಾದ್‌ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಹೈದರಾಬಾದ್, ಚೇತರಿಕೆ ಕಾಣಲೇ ಇಲ್ಲ.

ಕೋಲ್ಕತ್ತ ಪರ ಆ್ಯಂಡ್ರೆ ರಸೆಲ್ 19 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಮಿಚೆಲ್ ಸ್ಟಾರ್ಕ್ 14 ರನ್‌ಗೆ 2 ವಿಕೆಟ್ ಮತ್ತು ವೈಭವ್ ಅರೋರಾ 24 ರನ್‌ಗೆ 2 ವಿಕೆಟ್ ಉರುಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT