ಹೊಸ ಚಾಂಪಿಯನ್
ಐಪಿಎಲ್ ಆರಂಭದಿಂದಲೂ (18 ವರ್ಷಗಳಿಂದ) ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಈವರೆಗೆ ಟ್ರೋಫಿ ಎತ್ತಿ ಹಿಡಿದಿಲ್ಲ. ಹೀಗಾಗಿ, ಈ ಸಲ ಯಾರೇ ಗೆದ್ದರೂ, ಹೊಸ ಚಾಂಪಿಯನ್‌ನ ಉದಯವಾಗಲಿದೆ. ಆರ್‌ಸಿಬಿ 2009, 2011 ಹಾಗೂ 2016ರಲ್ಲಿ ಫೈನಲ್ ತಲುಪಿತ್ತು. ಕಿಂಗ್ಸ್ ಪಡೆ 2014ರಲ್ಲಿ ಪ್ರಶಸ್ತಿ ಸುತ್ತಿಗೇರಿತ್ತು.