ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ರಾತ್ರಿ ಮಳೆ ಸುರಿಯಲಿಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧದ ಪಂದ್ಯದಲ್ಲಿ ರನ್ ಹೊಳೆ ಹರಿಯಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ಸಿಬಿ ಬ್ಯಾಟರ್ಗಳು ಗುಡುಗಿದರು. ಆರಂಭಿಕರಾದ ಜಾಕೊಬ್ ಬೆಥೆಲ್, ವಿರಾಟ್ ಕೊಹ್ಲಿ ಮತ್ತು ರೊಮಾರಿಯೊ ಶೆಫರ್ಡ್ ಸಿಡಿಸಿದ ಅರ್ಧಶತಕಗಳ ಬಲದಿಂದ ಆತಿಥೇಯ ತಂಡ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 213 ರನ್ ಕಲೆಹಾಕಿತು.

ಅದಕ್ಕೆ ತಕ್ಕಂತೆ ದಿಟ್ಟ ಆಟವಾಡಿದ ಸಿಎಸ್ಕೆ ಆಟಗಾರರು, ಯಶಸ್ವಿಯಾಗಿ ಗುರಿ ಬೆನ್ನತ್ತುವ ಪ್ರಯತ್ನ ಮಾಡಿ ಕೊನೇ ಕ್ಷಣದಲ್ಲಿ ವಿಫಲರಾದರು. ಆರಂಭಿಕ ಆಯುಷ್ ಮ್ಹಾತ್ರೆ (94 ರನ್) ಮತ್ತು ರವೀಂದ್ರ ಜಡೇಜ (ಅಜೇಯ 77 ರನ್) ಹೋರಾಟ ನಡೆಸಿದರಾದರೂ, ತಮ್ಮ ತಂಡಕ್ಕೆ ಜಯ ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ, 20 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 211 ರನ್ ಕಲೆಹಾಕಿ, ಅಲ್ಪ ಅಂತರದ ಸೋಲೊಪ್ಪಿಕೊಳ್ಳಬೇಕಾಯಿತು.

ಈ ಪಂದ್ಯದ ಪ್ರಮುಖಾಂಶಗಳು ಇಲ್ಲಿವೆ

ಬೆಥೆಲ್ ಚೊಚ್ಚಲ ಅರ್ಧಶತಕ, ಕೊಹ್ಲಿಗೆ 7ನೇ ಫಿಫ್ಟಿ
ಆರ್ಸಿಬಿಯ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಗಿಟ್ಟಿಸಿರುವ ಜಾಕೊಬ್ ಬೆಥೆಲ್ ಅಮೋಘ ಆಟವಾಡಿದರು. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟ್ಸ್ ಎದುರು ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಅವರು, ಸಿಎಸ್ಕೆ ಎದುರು ವಿರಾಟ್ ಕೊಹ್ಲಿ ಜೊತೆಗೂಡಿ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 9.5 ಓವರ್ಗಳಲ್ಲಿ 97 ರನ್ ಸೇರಿಸಿದರು.
.IPL 2025 | RCB vs CSK: ಬೆಂಗಳೂರು ಬಳಗಕ್ಕೆ ರೋಚಕ ಜಯ.IPL 2025: KKR vs RR: ಗೆಲುವಿನ ಒತ್ತಡದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್.
ಜಾಕೊಬ್ 33 ಎಸೆತಗಳಲ್ಲಿ 53 ರನ್ ಗಳಿಸಿದರು. ಇದು ಅವರಿಗೆ ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ. ಇತ್ತ ಅಮೋಘ ಲಯ ಮುಂದುವರಿಸಿದ ವಿರಾಟ್ ಕೂಡ ಅರ್ಧಶತಕ ಗಳಿಸಿಕೊಂಡರು. 33 ಎಸೆತಗಳಲ್ಲಿ ತಲಾ ಐದು ಬೌಂಡರಿ ಮತ್ತು ಸಿಕ್ಸರ್ ಸಹಿತ 62 ರನ್ ಚಚ್ಚಿದರು. ಇದು ಪ್ರಸಕ್ತ ಟೂರ್ನಿಯಲ್ಲಿ ಅವರು ಕಲೆಹಾಕಿದ ಸತತ ನಾಲ್ಕನೇ ಹಾಗೂ ಒಟ್ಟಾರೆ 7ನೇ ಅರ್ಧಶತಕವಾಗಿದೆ.

ಆರೆಂಜ್ ಕ್ಯಾಪ್ ಪಡೆದ ಕೊಹ್ಲಿ
ಅರ್ಧಶತಕದೊಂದಿಗೆ ಟೂರ್ನಿಯಲ್ಲಿ ತಾವು ಗಳಿಸಿದ ರನ್ ಸಂಖ್ಯೆಯನ್ನು 550ಕ್ಕೆ (11 ಇನಿಂಗ್ಸ್) ಏರಿಸಿಕೊಂಡ ಕೊಹ್ಲಿ, ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು.

ಗುಜರಾತ್ ಟೈಟನ್ಸ್ನವರಾದ ಸಾಯಿ ಸುದರ್ಶನ್ (10 ಇನಿಂಗ್ಸ್, 504 ರನ್), ಜಾಸ್ ಬಟ್ಲರ್ (10 ಇನಿಂಗ್ಸ್, 470 ರನ್), ಶುಭಮನ್ ಗಿಲ್ (10 ಇನಿಂಗ್ಸ್, 465 ರನ್), ಮುಂಬೈ ಇಂಡಿಯನ್ಸ್ನ ಸೂರ್ಯಕುಮಾರ್ ಯಾದವ್ (11 ಇನಿಂಗ್ಸ್, 475 ರನ್) ಕೊಹ್ಲಿಗೆ ಪೈಪೋಟಿಯೊಡ್ಡುತ್ತಿದ್ದಾರೆ.

ಇಷ್ಟಲ್ಲದೆ ಕೊಹ್ಲಿ, ಅತಿಹೆಚ್ಚು (8) ಸಲ ಆವೃತ್ತಿಯೊಂದರಲ್ಲಿ 500ಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ 7 ಬಾರಿ, ಕೆ.ಎಲ್. ರಾಹುಲ್ 6 ಬಾರಿ ಈ ಸಾಧನೆ ಮಾಡಿದ್ದಾರೆ.

ಒಂದೇ ತಂಡದ ಪರ ಅತಿಹೆಚ್ಚು ಸಿಕ್ಸ್
ಇನಿಂಗ್ಸ್ನ ಮೂರನೇ ಓವರ್ನಲ್ಲಿ ಖಲೀಲ್ ಅಹ್ಮದ್ಗೆ ಸತತ ಎರಡು ಸಿಕ್ಸರ್ಗಳನ್ನು ಸಿಡಿಸಿದ ಕೊಹ್ಲಿ, ಆರ್ಸಿಬಿ ಪರ ಸಿಡಿಸಿದ ಸಿಕ್ಸರ್ಗಳ ಸಂಖ್ಯೆಯಲ್ಲಿ ತ್ರಿಶತಕದ ಗಡಿ ದಾಟಿದರು. ಅವರು ಬೆಂಗಳೂರು ಫ್ರಾಂಚೈಸ್ ಪರ ಒಟ್ಟು 304 ಸಿಕ್ಸರ್ ಸಿಡಿಸಿದ್ದಾರೆ.

ಒಂದೇ ತಂಡದ ಪರ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (263 - RCB), ರೋಹಿತ್ ಶರ್ಮಾ (262 - MI), ಕೀರನ್ ಪೊಲಾರ್ಡ್ (258 MI), ಎಂ.ಎಸ್. ಧೋನಿ (258 - CSK) ನಂತರದ ಸ್ಥಾನಗಳಲ್ಲಿದ್ದಾರೆ.
.ಲಖನೌ ತಂಡಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ; ದುಬಾರಿ ನಾಯಕರ ಮುಖಾಮುಖಿ ಇಂದು .Vaibhav Suryavanshi: ತ್ರಿವಿಕ್ರಮ ಹೆಜ್ಜೆಯ ‘ಬೇಬಿ ಬಾಸ್’.
ಇದಷ್ಟೇ ಅಲ್ಲ, ಒಂದೇ ಮೈದಾನದಲ್ಲಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆಯನ್ನೂ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡರು. ಬೆಂಗಳೂರಿನಲ್ಲಿ ಕೊಹ್ಲಿ 154 ಸಿಕ್ಸರ್ ಬಾರಿಸಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ಗೇಲ್ 151 ಸಿಕ್ಸರ್ ಸಿಡಿಸಿದ್ದಾರೆ.

ಸಿಎಸ್ಕೆ ವಿರುದ್ಧ 10ನೇ 50
ಚೆನ್ನೈ ತಂಡದ ವಿರುದ್ಧ ಐಪಿಎಲ್ನಲ್ಲಿ ಈವರೆಗೆ 35 ಪಂದ್ಯಗಳ 34 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 1,146 ರನ್ ಗಳಿಸಿದ್ದಾರೆ. ಜೊತೆಗೆ, ಈ ತಂಡದ ವಿರುದ್ಧ ಹೆಚ್ಚು (10) ಅರ್ಧಶತಕ ಗಳಿಸಿದ ಆಟಗಾರ ಎನಿಸಿದ್ದಾರೆ. ಶಿಖರ್ ಧವನ್ (9) ನಂತರದ ಸ್ಥಾನದಲ್ಲಿದ್ದಾರೆ

ಹೀಗೆ ಐಪಿಎಲ್ನಲ್ಲಿ ಒಂದೇ ತಂಡದ ವಿರುದ್ಧ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (1,134 ರನ್ vs ಪಂಜಾಬ್ ಕಿಂಗ್ಸ್) ಎರಡನೇ ಸ್ಥಾನದಲ್ಲಿದ್ದಾರೆ.

ಶೆಫರ್ಡ್ ಗುಡುಗು
ಬೆಥೆಲ್ ಹಾಗೂ ಕೊಹ್ಲಿ ವಿಕೆಟ್ ಪತನದ ನಂತರ ಆರ್ಸಿಬಿಯ ರನ್ ಗಳಿಕೆ ವೇಗ ಕುಸಿದಿತ್ತು. ಒಂದು ಹಂತದಲ್ಲಿ 14 ಓವರ್ಗಳಲ್ಲಿ 2 ವಿಕೆಟ್ಗೆ 140 ರನ್ ಗಳಿಸಿದ್ದ ಆರ್ಸಿಬಿ, ನಂತರದ 4 ನಾಲ್ಕು ಓವರ್ಗಳಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡು ಗಳಿಸಿದ್ದು 19 ರನ್ ಮಾತ್ರ.

ಕೊಹ್ಲಿ, ಬೆಥೆಲ್, ದೇವದತ್ತ ಪಡಿಕ್ಕಲ್ (17 ರನ್), ನಾಯಕ ರಜತ್ ಪಾಟೀದಾರ್ (11 ರನ್) ಹಾಗೂ ಜಿತೇಶ್ ಶರ್ಮಾ ಅವರು 60 ರನ್ ಅಂತರದಲ್ಲಿ ಔಟಾಗಿದ್ದರು.

ಹೀಗಾಗಿ, ಉಳಿದ ಎರಡು ಓವರ್ಗಳಲ್ಲಿ 180 ರನ್ ಗಳಿಸುವುದು ಕಷ್ಟ ಎನ್ನುವಂತಹ ಸ್ಥಿತಿ ಇತ್ತು.

ಈ ಹಂತದಲ್ಲಿ ರೊಮಾರಿಯೊ ಶೆಫರ್ಡ್ ಗುಡುಗಿದರು. ವೇಗಿ ಖಲೀಲ್ ಅಹ್ಮದ್ ಎಸೆದ ಇನಿಂಗ್ಸ್ನ 19ನೇ ಓವರ್ನಲ್ಲಿ ನಾಲ್ಕು ಸಿಕ್ಸರ್, ಎರಡು ಬೌಂಡರಿ ಸಹಿತ 33 ರನ್ ಚಚ್ಚಿದರು. ಅದರೊಂದಿಗೆ, ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಮಥೀಷ ಪತಿರಾಣ ಹಾಕಿದ ಕೊನೇ ಓವರ್ನಲ್ಲಿ ಮತ್ತೆ ಅಬ್ಬರಿಸಿದ ಅವರು, ತಲಾ ಎರಡು ಬೌಂಡರಿ ಮತ್ತು ಸಿಕ್ಸರ್ ಸಹಿತ 20 ರನ್ ಕಲೆಹಾಕಿದರು.

ಹೀಗಾಗಿ, ಅಂತಿಮ ಎರಡು ಓವರ್ಗಳಲ್ಲಿ 54 ರನ್ ಬಂದವು. ಇದು, 19, 20ನೇ ಓವರ್ನಲ್ಲಿ ಬಂದ ಗರಿಷ್ಠ ಮೊತ್ತವೆನಿಸಿತು.

ಇವರ ಆಟದ ಬಲದಿಂದ ಆತಿಥೇಯ ತಂಡ, 213 ರನ್ ಕಲೆಹಾಕಲು ಸಾಧ್ಯವಾಯಿತು.

ಕೇವಲ 14 ಎಸೆತಗಳನ್ನು ಎದುರಿಸಿದ ಶೆಫರ್ಡ್, 6 ಸಿಕ್ಸ್, 4 ಬೌಂಡರಿ ಸಹಿತ 53 ರನ್ ಬಾರಿಸಿ ಅಜೇಯವಾಗಿ ಉಳಿದರು. ಇದು, ಐಪಿಎಲ್ನಲ್ಲಿ ದಾಖಲಾದ ಎರಡನೇ ಅತಿವೇಗದ ಅರ್ಧಶತಕ.
.ಮಹಿಳಾ ಕ್ರಿಕೆಟ್: ಭಾರತಕ್ಕೆ ಹ್ಯಾಟ್ರಿಕ್ ಗೆಲುವಿನ ಛಲ.ಅಂಗವಿಕಲರ ಕ್ರಿಕೆಟ್: ಭಾರತಕ್ಕೆ ಮಣಿದ ಲಂಕಾ.
ಐಪಿಎಲ್ನಲ್ಲಿ ವೇಗದ ಅರ್ಧಶತಕಗಳು
ಯಶಸ್ವಿ ಜೈಸ್ವಾಲ್ – 13 ಎಸೆತ (RR vs KKR, 2023)
ಕೆ.ಎಲ್.ರಾಹುಲ್ – 14 ಎಸೆತ (PBKS vs DC, 2018)
ಪ್ಯಾಟ್ ಕಮಿನ್ಸ್ – 14 ಎಸೆತ (KKR vs MI, 2022)
ರೊಮಾರಿಯೊ ಶೆಫರ್ಡ್ – 14 ಎಸೆತ (RCB vs CSK, 2025)

ಮ್ಹಾತ್ರೆ ವಿಶೇಷ ದಾಖಲೆ
ಗುರಿ ಬೆನ್ನತ್ತಿದ ಸಿಎಸ್ಕೆ ಪರ ದಿಟ್ಟ ಆಟವಾಡಿದ ಆಯುಷ್ ಮ್ಹಾತ್ರೆ ಶತಕದ ಹೊಸ್ತಿಲಲ್ಲಿ (94 ರನ್) ಔಟಾದರು. ಆದರೆ, ಐಪಿಎಲ್ನಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಮೂರನೇ ಅತಿಕಿರಿಯ ಬ್ಯಾಟರ್ ಎನಿಸಿಕೊಂಡರು. ಅವರ ವಯಸ್ಸು ಈಗ 17 ವರ್ಷ 291 ದಿನಗಳು.

ಇದೇ ಆವೃತ್ತಿಯಲ್ಲಿ ಗುಜರಾತ್ ವಿರುದ್ಧ ಶತಕ ಸಿಡಿಸಿದ್ದ ರಾಜಸ್ಥಾನ ತಂಡದ ವೈಭವ್ ಸೂರ್ಯವಂಶಿ (14 ವರ್ಷ 32 ದಿನಗಳು) ಮತ್ತು ಆರ್ಆರ್ ನಾಯಕ ರಿಯಾನ್ ಪರಾಗ್ (17 ವರ್ಷ 175 ದಿನಗಳು) ಮ್ಹಾತ್ರೆಗಿಂತ ಮುಂದಿದ್ದಾರೆ.

ಧೋನಿ ಸಿಕ್ಸರ್ ಸಾಧನೆ
ಪಂದ್ಯದಲ್ಲಿ ತಮ್ಮ ತಂಡಕ್ಕೆ ಜಯ ತಂದುಕೊಡಲು ವಿಫಲವಾದರೂ, ಒಂದು ಸಿಕ್ಸರ್ ಬಾರಿಸುವ ಮೂಲಕ ಒಂದೇ ತಂಡದ ವಿರುದ್ಧ 50 ಸಲ ಚೆಂಡನ್ನು ಬೌಂಡರಿ ಗೆರೆಯಾಚೆ ಕಳುಹಿಸಿದ ಬ್ಯಾಟರ್ ಎನಿಸಿಕೊಂಡರು.

ಗೇಲ್ ಪಂಜಾಬ್ ಕಿಂಗ್ಸ್ (61 ಸಿಕ್ಸ್) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ (54 ಸಿಕ್ಸ್), ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ (50 ಸಿಕ್ಸ್) ಈ ಸಾಧನೆ ಮಾಡಿದ್ದಾರೆ.

ಅತಿ ಕಡಿಮೆ ಅಂತರ: ಆರ್ಸಿಬಿಗೆ ಸಿಹಿ, ಚೆನ್ನೈಗೆ ಕಹಿ
ಈ ಪಂದ್ಯವನ್ನು ಆರ್ಸಿಬಿ ಕೇವಲ 2 ರನ್ ಅಂತರದಿಂದ ಗೆದ್ದುಕೊಂಡಿತು. ಇದು ರನ್ ಅಂತರದಲ್ಲಿ ಆರ್ಸಿಬಿಗೆ ದೊರೆತ ಎರಡನೇ ಅತಿ ಕಡಿಮೆ ಅಂತರದ ಜಯವಾಗಿದೆ.

ಈ ಮೊದಲು, ಡೆಲ್ಲಿ ಕ್ಯಾಪಿಟಲ್ಸ್ (2021), ಪಂಜಾಬ್ ಕಿಂಗ್ಸ್ (2016), ಚೆನ್ನೈ ಸೂಪರ್ ಕಿಂಗ್ಸ್ (2019) ವಿರುದ್ಧ ಒಂದು ರನ್ನಿಂದ ಗೆದ್ದಿದ್ದ ಆರ್ಸಿಬಿ, 2013ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ರನ್ಗಳ ಜಯ ಸಾಧಿಸಿತ್ತು.

ಚೆನ್ನೈಗೂ ಇದು ಎರಡನೇ ಅತಿಕಡಿಮೆ ಅಂತರದ ಸೋಲಾಯಿತು. ಈ ತಂಡ, 2019ರಲ್ಲಿ ಆರ್ಸಿಬಿ ಹಾಗೂ ಮುಂಬೈ ವಿರುದ್ಧ 1 ರನ್ ಮುಖಭಂಗ ಅನುಭವಿಸಿತ್ತು.

ಮಾಹಿತಿ: https://www.cricbuzz.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.