ಮಂಗಳವಾರ, ಜನವರಿ 28, 2020
18 °C

ಐಪಿಎಲ್‌ ಹರಾಜು: ಕೋಟ್ಯಾಧಿಪತಿಗಳಾದ ಪಾನಿಪುರಿ ಹುಡುಗ, ಬಸ್ ಚಾಲಕನ ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ನಗರದ ರಸ್ತೆಬದಿಯಲ್ಲಿ ಪಾನಿಪುರಿ ಮಾರಾಟ ಮಾಡಿ ಕ್ರಿಕೆಟ್‌ ಕಿಟ್‌ಗೆ ಹಣ ಹೊಂದಿಸಿಕೊಳ್ಳುತ್ತಿದ್ದ ಯಶಸ್ವಿ ಜೈಸ್ವಾಲ್ ಹಾಗೂ ಶಾಲಾವಾಹನ ಚಾಲನೆಮಾಡುತ್ತಿದ್ದ ಉತ್ತರ ಪ್ರದೇಶದ ನರೇಶ್‌ ಗರ್ಗ್‌ ಅವರ ಮಗ ಪ್ರಿಯಂ ಗರ್ಗ್‌ ಈಗ ಕೋಟ್ಯಾಧಿಪತಿಗಳಾಗಿದ್ದಾರೆ.

ಇದನ್ನೂ ಓದಿ: ಹಾಲು ಮಾರಾಟಗಾರನ ಮಗ ವಿಶ್ವಕಪ್ ಕ್ರಿಕೆಟ್ ತಂಡದ ನಾಯಕನಾದ ಕಥೆ

ಕೋಲ್ಕತ್ತದಲ್ಲಿ ಗುರುವಾರ ನಡೆದ ಐಪಿಎಲ್‌ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಿಂದ ಜೈಸ್ವಾಲ್‌ ಹಾಗೂ ಗರ್ಗ್‌ ಅದೃಷ್ಟ ಬದಲಾಗಿದೆ.


ಪ್ರಿಯಂ ಗರ್ಗ್‌

19 ವರ್ಷದೊಳಗಿನವರ ವಿಶ್ವಕಪ್‌ಗೆ ಭಾರತ ತಂಡದ ನಾಯಕರಾಗಿರುವ ಪ್ರಿಯಂ ಗರ್ಗ್ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಖರೀದಿಸಿದೆ. ಉತ್ತರ ಪ್ರದೇಶದ ಪರಿಕ್ಷಿತ್‌ಗರ್‌ನ ಗರ್ಗ್‌ ಅವರಿಗೆ ₹ 50 ಲಕ್ಷ ನೀಡಿ ಮೂಲಬೆಲೆ ನಿಗದಿಯಾಗಿತ್ತು. ಆದರೆ, ಬಿಡ್‌ನಲ್ಲಿ ₹ 1.90 ಕೋಟಿ ನೀಡಲಾಗಿದೆ.


ಯಶಸ್ವಿ ಜೈಸ್ವಾಲ್

ಪ್ರಿಯಂ ತಂದೆ ನರೇಶ್‌ ಗರ್ಗ್‌ ಅವರು ಶಾಲಾವಾಹನ ಚಾಲನೆ ಹಾಗೂ ಹಾಲು ಮಾರಾಟ ಮಾಡಿ ತಮ್ಮ ಪುತ್ರನಿಗೆ ಕ್ರಿಕೆಟ್‌ ತರಬೇತಿ ಕೊಡಿಸಿದ್ದರು.

ಗರ್ಗ್‌ ನಾಯಕತ್ವದ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಯಶಸ್ವಿ ಜೈಸ್ವಾಲ್‌ ಅವರು ರಾಜಸ್ಥಾನ್ ರಾಯಲ್ಸ್‌ ತಂಡದ ಪಾಲಾಗಿದ್ದಾರೆ.

ಈಚೆಗೆ ನಡೆದ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿಯೂ ಸ್ಫೋಟಕ ಬ್ಯಾಟಿಂಗ್‌ ಮಾಡಿ ಗಮನ ಸೆಳೆದಿದ್ದ ಯಶಸ್ವಿಯನ್ನು ₹ 2.40 ಕೋಟಿಗೆ ಖರೀದಿಸಲಾಗಿದೆ.

ವಿವಿಧ ತಂಡಗಳಿಗೆ ಮಾರಾಟವಾದ ಆಟಗಾರರು (ಬೆಲೆ ಕೋಟಿಗಳಲ್ಲಿ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು