ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Auction: ಮಾರಾಟವಾಗದ ಮನೀಷ್ ಪಾಂಡೆ, ಯಾರಿಗೂ ಬೇಡ ಸ್ಟೀವ್ ಸ್ಮಿತ್

Published 19 ಡಿಸೆಂಬರ್ 2023, 12:51 IST
Last Updated 19 ಡಿಸೆಂಬರ್ 2023, 12:51 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಹಲವು ಆವೃತ್ತಿಗಳಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಮನೀಷ್ ಪಾಂಡೆ ಅವರನ್ನು ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಂಡದ ಖರೀದಿ ಮಾಡಿಲ್ಲ. ಅವರಷ್ಟೇ ಅಲ್ಲ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಇನ್ನೂ ಕೆಲವು ಪ್ರಮುಖರು ಅಚ್ಚರಿಯೆಂಬಂತೆ ಬಿಕರಿಯಾಗದೆ ಉಳಿದಿದ್ದಾರೆ.

2024ರ ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಗಾಗಿ ಇಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿಗಳಾದ ಮಿಚೇಲ್‌ ಸ್ಟಾರ್ಕ್‌ ಮತ್ತು ಪ್ಯಾಟ್‌ ಕಮಿನ್ಸ್‌ ಅವರು ಕ್ರಮವಾಗಿ ₹ 24.75 ಕೋಟಿ ಹಾಗೂ ₹ 20.50 ಕೋಟಿ ಜೇಬಿಗಿಳಿಸಿಕೊಂಡಿದ್ದು, ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರು ಎನಿಸಿಕೊಂಡಿದ್ದಾರೆ.

ಭಾರತದ ಪರ ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿ ಹೊಂದಿರುವ ಮನೀಷ್‌ ಪಾಂಡೆ, ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌, ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ ಸೇರಿದಂತೆ ಹಲವು ಆಟಗಾರನ್ನು ಖರೀದಿಸಲು ಯಾವ ತಂಡವೂ ಒಲವು ತೋರಿಲ್ಲ.

ಮಾರಾಟವಾಗದ ಪ್ರಮುಖ ಆಟಗಾರರು
1. ಲಾಕಿ ಫರ್ಗ್ಯೂಸನ್‌ (ನ್ಯೂಜಿಲೆಂಡ್‌): ಮೂಲ ಬೆಲೆ ₹ 2 ಕೋಟಿ
2. ರಿಲೀ ರೊಸ್ಸೊ (ದಕ್ಷಿಣ ಆಫ್ರಿಕಾ): ಮೂಲ ಬೆಲೆ ₹ 2 ಕೋಟಿ
3. ಸ್ಟೀವ್‌ ಸ್ಮಿತ್‌ (ಆಸ್ಟ್ರೇಲಿಯಾ): ಮೂಲ ಬೆಲೆ ₹ 2 ಕೋಟಿ
4. ಜೋಶ್‌ ಹ್ಯಾಜಲ್‌ವುಡ್‌ (ಆಸ್ಟ್ರೇಲಿಯಾ): ಮೂಲ ಬೆಲೆ ₹ 2 ಕೋಟಿ
5. ಮಜೀಬ್ ಉರ್‌ ರಹಮಾನ್‌ (ಅಫ್ಗಾನಿಸ್ತಾನ): ಮೂಲ ಬೆಲೆ ₹ 2 ಕೋಟಿ
6. ಜೋಶ್‌ ಇಂಗ್ಲಿಸ್‌ (ಆಸ್ಟ್ರೇಲಿಯಾ): ಮೂಲ ಬೆಲೆ ₹ 2 ಕೋಟಿ
7. ಆದಿಲ್‌ ರಶೀದ್‌ (ಇಂಗ್ಲೆಂಡ್‌): ಮೂಲ ಬೆಲೆ ₹ 2 ಕೋಟಿ
8. ಫಿಲ್‌ ಸಾಲ್ಟ್‌ (ಇಂಗ್ಲೆಂಡ್‌): ಮೂಲ ಬೆಲೆ ₹ 1.5 ಕೋಟಿ
9. ಈಶ್‌ ಸೋದಿ (ನ್ಯೂಜಿಲೆಂಡ್‌): ಮೂಲ ಬೆಲೆ ₹ 75 ಲಕ್ಷ
10. ತಬ್ರೇಜ್‌ ಶಂಸಿ (ದಕ್ಷಿಣ ಆಫ್ರಿಕಾ): ಮೂಲ ಬೆಲೆ ₹ 50 ಲಕ್ಷ
11. ಕುಶಾಲ್‌ ಮೆಂಡಿಸ್‌ (ಶ್ರೀಲಂಕಾ): ಮೂಲ ಬೆಲೆ ₹ 50 ಲಕ್ಷ
12. ಮನೀಷ್ ಪಾಂಡೆ (ಭಾರತ): ಮೂಲ ಬೆಲೆ ₹ 50 ಲಕ್ಷ
13. ಕರುಣ್‌ ನಾಯರ್‌ (ಭಾರತ): ಮೂಲ ಬೆಲೆ ₹ 50 ಲಕ್ಷ
14. ಮನನ್‌ ವೋಹ್ರಾ (ಭಾರತ): ಮೂಲ ಬೆಲೆ ₹ 20 ಲಕ್ಷ
15. ಸರ್ಫರಾಜ್‌ ಖಾನ್‌ (ಭಾರತ): ಮೂಲ ಬೆಲೆ ₹ 20 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT