ಶಾರ್ಜಾ: ಶಾರ್ಜಾ ಕ್ರಿಕೆಟ್ ಅಂಗಳದಲ್ಲಿ ನಡೆದಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತ ನೈಟ್ರೈಡರ್ಸ್ ವಿರುದ್ಧ 82 ರನ್ ಅಂತರದ ಗೆಲುವು ಸಾಧಿಸಿತು.

ಆರ್ಸಿಬಿ ನೀಡಿದ 195 ರನ್ಗಳ ಸವಾಲಿನ ಗುರಿ ಎದುರು ಕೆಕೆಆರ್ ದಿಟ್ಟ ಆಟವಾಡುವಲ್ಲಿ ವಿಫಲವಾಯಿತು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು, ದಿನೇಶ್ ಕಾರ್ತಿಕ್ ಪಡೆಗೆ ಮುಳುವಾಯಿತು. ವಿರಾಟ್ ಕೊಹ್ಲಿ ಪಡೆಯಬೌಲರ್ಗಳ ಶಿಸ್ತಿನ ದಾಳಿಗೆ ಪ್ರತಿಯಾಗಿಶುಭಮನ್ ಗಿಲ್ (34), ಆ್ಯಂಡ್ರೆ ರಸೆಲ್ (16) ಮತ್ತು ರಾಹುಲ್ ತ್ರಿಪಾಠಿ (16) ಮಾತ್ರವೇ ಎರಡಂಕಿ ದಾಟಿದರು. ಹೀಗಾಗಿ ಈ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 112 ರನ್ ಗಳಿಸಲಷ್ಟೇ ಶಕ್ತವಾಯಿತು.

IPL-2020 LIVE| RCB vs KKR: ಕೆಕೆಆರ್ ಗೆಲುವಿಗೆ 195 ರನ್ ಗುರಿ

ಆರ್ಸಿಬಿ ಪರ ಕ್ರಿಸ್ ಮೊರಿಸ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ಗಳನ್ನು ಪಡೆದುಕೊಂಡರೆ, ನವದೀಪ್ ಸೈನಿ, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್ ಮತ್ತು ಇಸುರು ಉದಾನ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಇದರೊಂದಿಗೆ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದಆರ್ಸಿಬಿ,ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.ಕೆಕೆಆರ್ 7 ಪಂದ್ಯಗಳಲ್ಲಿ 4ನೇ ಸೋಲು ಕಂಡು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಜೊತೆಯಾಟದ ದಾಖಲೆ
ಪಂದ್ಯದಲ್ಲಿಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆಕನ್ನಡಿಗ ದೇವದತ್ತ ಪಡಿಕ್ಕಲ್ (33) ಮತ್ತು ಆ್ಯರನ್ ಫಿಂಚ್ (47) ಜೋಡಿ ಉತ್ತಮ ಆರಂಭ ನೀಡಿತು. ಇವರಿಬ್ಬರುಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 7.4 ಓವರ್ಗಳಲ್ಲಿ 67 ರನ್ ಕಲೆಹಾಕಿದರು. ಪಡಿಕ್ಕಲ್ ಹಾಗೂ ಫಿಂಚ್ ವಿಕೆಟ್ ಪತನದ ಬಳಿಕಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಆಟ ಕಳೆಗಟ್ಟಿತು.

ಮೂರನೇ ವಿಕೆಟ್ ಜೊತೆಯಾಟದಲ್ಲಿ ಕೊಹ್ಲಿ ಮತ್ತು ವಿಲಿಯರ್ಸ್ ಕೇವಲ 46ಎಸೆತಗಳಲ್ಲಿ ಅಜೇಯ 100 ರನ್ ಚಚ್ಚಿದರು. ಇದರೊಂದಿಗೆ ಈ ಜೋಡಿ 73ನೇ ಇನಿಂಗ್ಸ್ನಲ್ಲಿ ಬರೋಬ್ಬರಿ ಮೂರು ಸಾವಿರ (3,034)ರನ್ಗಳ ಜೊತೆಯಾಟವಾಡಿದ ಸಾಧನೆ ಮಾಡಿತು.ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಇದು.

ಕೇವಲ 33 ಎಸೆತಗಳನ್ನು ಎದುರಿಸಿದ ವಿಲಿಯರ್ಸ್ 6 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 73 ರನ್ ಬಾರಿಸಿದರು. ಇದರಿಂದಾಗಿಕೊನೆಯ ಆರು ಓವರ್ಗಳಲ್ಲಿ ಬರೋಬ್ಬರಿ 83 ರನ್ ಹರಿದು ಬಂದಿತು.ಅವರಿಗೆ ಉತ್ತಮ ಬೆಂಬಲ ನೀಡಿದ ಕೊಹ್ಲಿ 33 ರನ್ ಗಳಿಸಿದರು.

ಅತಿಹೆಚ್ಚು ಬಾರಿ ಪಂದ್ಯಶ್ರೇಷ್ಠ
ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವಿಲಿಯರ್ಸ್ ಐಪಿಎಲ್ನಲ್ಲಿ ಅತಿಹೆಚ್ಚು ಬಾರಿ(22ನೇ ಬಾರಿ) ಈ ಸಾಧನೆ ಮಾಡಿದ ಆಟಗಾರಎನಿಸಿದರು. ಕ್ರಿಸ್ ಗೇಲ್ (21 ಸಲ) ಮತ್ತು ರೋಹಿತ್ ಶರ್ಮಾ (18 ಬಾರಿ) ಕ್ರಮವಾಗಿಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.