ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | KKR vs SRH: ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದ ಕೆಕೆಆರ್‌
LIVE

ಅಬುಧಾಬಿ: ಇಂದಿನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ ಕೋಲ್ಕತ್ತ ನೈಟ್‌ರೈಡರ್ಸ್‌ ಗೆಲುವು ಸಾಧಿಸಿತು.
Last Updated 18 ಅಕ್ಟೋಬರ್ 2020, 14:37 IST
ಅಕ್ಷರ ಗಾತ್ರ
14:2218 Oct 2020

ಕೆಕೆಆರ್‌ಗೆ ಸೂಪರ್‌ ಜಯ

ಕೆಕೆಆರ್ ಪರ ಎಯಾನ್‌ ಮಾರ್ಗನ್‌ ಮತ್ತು ದಿನೇಶ್ ಕಾರ್ತಿಕ್‌ ಸೂಪರ್‌ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿದರು. ರೈಸರ್ಸ್‌ ಪರ ರಶೀದ್ ಖಾನ್‌ ಬೌಲಿಂಗ್ ಮಾಡಿದರು.

ಮಾರ್ಗನ್‌ ಎದುರಿಸಿದ ಮೊದಲ ಎಸೆತದಲ್ಲಿ ರನ್‌ ಬರಲಿಲ್ಲ. 2ನೇ ಎಸೆತದಲ್ಲಿ ಒಂದು ರನ್‌ ಗಳಿಸಿಕೊಂಡರು.

ಮೂರನೇ ಎಸೆತವನ್ನು ದಿನೇಶ್‌ ಎದುರಿಸಿದರಾದರೂ ಮತ್ತೆ ರನ್‌ ಬರಲಿಲ್ಲ. ಆದರೆ ನಾಲ್ಕನೇ ಎಸೆತದಲ್ಲಿ 2 ಇತರೆ ರನ್‌ಗಳು ಬಂದವು.

ಹೀಗಾಗಿ ಕೆಕೆಆರ್‌ ಜಯದ ನಗೆ ಬೀರಿತು.

ಇದರೊಂದಿಗೆ ಕೆಕೆಆರ್ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದರೆ, ರೈಸರ್ಸ್‌ 6ನೇ ಸೋಲು ಅನುಭವಿಸಿತು.

14:1118 Oct 2020

ಕೆಕೆಆರ್‌ಗೆ ಮೂರು ರನ್‌ ಗುರಿ

ಸೂಪರ್‌ ಓವರ್‌ನಲ್ಲಿ ಸನ್‌ರೈಸರ್ಸ್‌ ಪರ ಡೇವಿಡ್‌ ವಾರ್ನರ್‌ ಮತ್ತು ಜಾನಿ ಬೈರ್ಸ್ಟ್ರೋವ್‌ ಬ್ಯಾಟಿಂಗ್‌ಗೆ ಮಾಡಿದರು. ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‌ ಬೀಸಿದ್ದ ವಾರ್ನರ್ ಮೊದಲ ಎಸೆತದಲ್ಲೇ ಕ್ಲೀನ್‌ ಬೌಲ್ಡ್ ಆದರು.

ಬಳಿಕ ಕ್ರೀಸ್‌ಗೆ ಬಂದ ಅಬ್ದುಲ್‌ ಸಮದ್‌, ಎರಡನೇ ಎಸೆತದಲ್ಲಿ 2 ರನ್‌ ಗಳಿಸಿದರು. ಮೂರನೇ ಎಸೆತದಲ್ಲಿ ಅವರೂ ಬೌಲ್ಡ್‌ ಆದರು.

ಇದರೊಂದಿಗೆ ರೈಸರ್ಸ್‌ ಆಟಕ್ಕೆ ತೆರೆ ಬಿದ್ದಿದ್ದು, ಕೆಕೆಆರ್‌ ತಂಡ ಗೆಲ್ಲಲು ಕೇವಲ 3 ರನ್‌ ಗಳಿಸಬೇಕಿದೆ.

ಬೌಲರ್‌: ಲುಕಿ ಫರ್ಗ್ಯೂಸನ್‌ (W 2 W)

14:0518 Oct 2020

ಸೂಪರ್ ಓವರ್‌ಗೆ ಸಾಗಿದ ಪಂದ್ಯ

ಡೇವಿಡ್‌ ವಾರ್ನರ್‌ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಎಸ್‌ಎಚ್‌ಆರ್‌–ಕೆಕೆಆರ್‌ ಪಂದ್ಯ ಸೂಪರ್ ಓವರ್‌ಗೆ ಸಾಗಿದೆ.
ಆ್ಯಂಡ್ರೆ ರಸೆಲ್‌ ಎಸೆದ ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್‌ಗೆ 18 ರನ್‌ ಬೇಕಾಗಿತ್ತು. ಈ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಬಾರಿಸಿದ ವಾರ್ನರ್‌, ತಮ್ಮ ತಂಡ 17 ರನ್‌ ಗಳಿಸಿಕೊಳ್ಳಲು ನೆರವಾದರು. ಹೀಗಾಗಿ ಪಂದ್ಯ ಸೂಪರ್‌ ಓವರ್‌ಗೆ ಸಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರೈಡರ್ಸ್‌ 5 ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿತ್ತು. ಇದೀಗ ರೈಸರ್ಸ್‌ ಕೂಡ 6 ವಿಕೆಟ್‌ಗಳನ್ನು ಕಳೆದುಕೊಂಡು ಇಷ್ಟೇ ರನ್‌ ಗಳಿಸಿದೆ.
ಇದು ಈ ಬಾರಿ ಸೂಪರ್‌ಓವರ್‌ಗೆ ಸಾಗಿದ ಮೂರನೇ ಪಂದ್ಯ.
ಬೌಲರ್: ಆ್ಯಂಡ್ರೆ ರಸೆಲ್‌ (N 1 4 4 4 2 L1)

13:5418 Oct 2020

ಕೊನೆಯ ಓವರ್‌ನಲ್ಲಿ ಬೇಕು 18 ರನ್

19 ಓವರ್‌ಗಳ ಅಂತ್ಯಕ್ಕೆ ರೈಸರ್ಸ್‌ 6 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿದೆ. ಉಳಿದಿರುವ ಒಂದು ಓವರ್‌ನಲ್ಲಿ ಗೆಲ್ಲಲು 18 ರನ್‌ ಬೇಕಾಗಿದೆ.

ಈ ಓವರ್‌ನ ಕೊನೆ ಎಸೆತದಲ್ಲಿ ಅಬ್ದುಲ್‌ ಸಮದ್ ಬಲವಾಗಿ ಬಾರಿಸಿದ ಚೆಂಡನ್ನು ಲುಕಿ ಫರ್ಗ್ಯೂಸನ್ ಮತ್ತು ಶುಭಮನ್‌ ಗಿಲ್‌ ಅಮೋಘ ರೀತಿಯಲ್ಲಿ ಹಿಡಿತಕ್ಕೆ ಪಡೆದರು. ಹೀಗಾಗಿ ಸಮದ್‌ ವಿಕೆಟ್‌ ಕಳೆದುಕೊಳ್ಳಬೇಕಾಯಿತು.

ಬೌಲಿಂಗ್‌: ಶಿವಂ ಮಾವಿ (4 1 4 1 2 W)

13:4718 Oct 2020

18ನೇ ಓವರ್ ಮುಕ್ತಾಯ

18 ಓವರ್‌ಗಳ ಆಟ ಮುಕ್ತಾಯವಾಗಿದ್ದು ರೈಸರ್ಸ್‌ 5 ವಿಕೆಟ್‌ ಕಳೆದುಕೊಂಡು 134 ರನ್‌ ಗಳಿಸಿದೆ. ಉಳಿದಿರುವ 2 ಓವರ್‌ಗಳಲ್ಲಿ ಗೆಲ್ಲಲು 30 ರನ್‌ ಗಳಿಸಬೇಕಿದೆ.

ಬೌಲರ್‌: ಲುಕಿ ಫರ್ಗ್ಯೂಸನ್‌ (0 2 0 1 2 2)

13:4418 Oct 2020

17ನೇ ಓವರ್ ಮುಕ್ತಾಯ

17 ಓವರ್‌ನ ಅಂತ್ಯಕ್ಕೆ ರೈಸರ್ಸ್‌ 5 ವಿಕೆಟ್‌ ಕಳೆದುಕೊಂಡು 127 ರನ್‌ ಗಳಿಸಿದೆ.
ಬೌಲರ್‌: ವರುಣ್‌ ಚಕ್ರವರ್ತಿ (2 1 0 4 1 2)
 

13:3718 Oct 2020

16ನೇ ಓವರ್ ಮುಕ್ತಾಯ

16 ಓವರ್‌ ಅಂತ್ಯಕ್ಕೆ ಸನ್‌ರೈಸರ್ಸ್‌ 5 ವಿಕೆಟ್‌ ಕಳೆದುಕೊಂಡು 117 ರನ್‌ ಗಳಿಸಿದೆ.
ವಿಜಯ್‌ ಶಂಕರ್ ಈ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ,
ಬೌಲರ್‌: ಪ್ಯಾಟ್‌ ಕಮಿನ್ಸ್‌ (0 W 2 0 6 0)

13:2918 Oct 2020

ಐಪಿಎಲ್‌–2020: 5 ಸಾವಿರ ರನ್‌ ಕಲೆಹಾಕಿದ ಮೊದಲ ವಿದೇಶಿ ಆಟಗಾರ ವಾರ್ನರ್

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್‌, ಇಂದು ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 10 ರನ್‌ ಗಳಿಸಿದ್ದ ವೇಳೆ ಐದು ಸಾವಿರ ರನ್‌ ಕಲೆಹಾಕಿದ ಸಾಧನೆ ಮಾಡಿದರು.

ವಾರ್ನರ್‌ಗೆ ಐಪಿಎಲ್‌ನಲ್ಲಿ ಇದು 135ನೇ ಪಂದ್ಯ. ಹೀಗಾಗಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎಂಬ ಶ್ರೇಯವೂ ಅವರದ್ದಾಯಿತು. ಮಾತ್ರವಲ್ಲದೆ ಟೂರ್ನಿಯಲ್ಲಿ ಇದುವರೆಗೆ ವಾರ್ನರ್‌ ಹೊರತುಪಡಿಸಿ ಇನ್ಯಾವ ವಿದೇಶಿ ಆಟಗಾರನೂ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.

ಈ ಮೊದಲು ಭಾರತದ ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ ಮತ್ತು ರೋಹಿತ್‌ ಶರ್ಮಾ ಗಳಿಸಿಕೊಂಡಿದ್ದರು. ಕೊಹ್ಲಿ ತಮ್ಮ 165ನೇ ಪಂದ್ಯದಲ್ಲಿ, ರೋಹಿತ್‌ 177ನೇ ಇನಿಂಗ್ಸ್ ಹಾಗೂ ರೋಹಿತ್‌ ಶರ್ಮಾ 192ನೇ ಇನಿಂಗ್ಸ್‌ನಲ್ಲಿ 5 ಸಾವಿರ ರನ್‌ ಗಳಿಸಿಕೊಂಡಿದ್ದರು.

13:2318 Oct 2020

15ನೇ ಓವರ್ ಮುಕ್ತಾಯ

15 ಓವರ್‌ ಅಂತ್ಯಕ್ಕೆ ಸನ್‌ರೈಸರ್ಸ್‌ 4 ವಿಕೆಟ್‌ ಕಳೆದುಕೊಂಡು 109 ರನ್‌ ಗಳಿಸಿದೆ.
ಬೌಲರ್‌: ಕುಲದೀಪ್‌ ಯಾದವ್‌ ( Wd 1 2 1 2 1 1)

13:1818 Oct 2020

14ನೇ ಓವರ್ ಮುಕ್ತಾಯ

14 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಸನ್‌ರೈಸರ್ಸ್‌ 100 ರನ್‌ ಗಳಿಸಿದೆ. ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಉಳಿದಿರುವ 6 ಓವರ್‌ಗಳಲ್ಲಿ ಗೆಲ್ಲಲು 64 ರನ್‌ ಗಳಿಸಬೇಕಾಗಿದೆ.
ಬೌಲರ್‌: ಪ್ಯಾಟ್‌ ಕಮಿನ್ಸ್‌ (L4 1 0 1 4 1)