ಮಂಗಳವಾರ, ಜನವರಿ 18, 2022
22 °C

IPL 2022: ರಾಹುಲ್ ಕೈಬಿಟ್ಟ ಪಂಜಾಬ್, ಕೊಹ್ಲಿ, ಮ್ಯಾಕ್ಸ್‌ವೆಲ್ ಉಳಿಸಿದ ಆರ್‌ಸಿಬಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಂಗಳವಾರ ಸಲ್ಲಿಸಿವೆ.

ಪಂಜಾಬ್‌ ಕಿಂಗ್ಸ್ ತಂಡವು ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಕೈಬಿಟ್ಟಿದೆ. ಅದೇ ರೀತಿ ಬ್ಯಾಟಿಂಗ್ ದೈತ್ಯ, ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್ ಅವರನ್ನೂ ಕೈಬಿಟ್ಟಿದೆ. ಗರಿಷ್ಠ ನಾಲ್ವರನ್ನು ಉಳಿಸಿಕೊಳ್ಳಬಹುದಾಗಿದ್ದರೂ ಮಯಂಕ್ ಅಗರ್ವಾಲ್ ಹಾಗೂ ಆರ್ಶದೀಪ್ ಸಿಂಗ್‌ರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡಿದೆ.

ಓದಿ: 

ರಾಹುಲ್ ಅವರನ್ನು ತಂಡದಿಂದ ಈ ಬಾರಿ ಕೈಬಿಡುವ ಸಾಧ್ಯತೆ ಇದೆ. ಅವರು ಹೊಸದಾಗಿ ಆರಂಭಗೊಳ್ಳಲಿರುವ ಎರಡು ಫ್ರಾಂಚೈಸಿಗಳ ಪೈಕಿ ಒಂದರಲ್ಲಿ ಆಡಲಿದ್ದಾರೆ ಎಂಬೆಲ್ಲ ವದಂತಿಗಳು ಈ ಹಿಂದೆಯೇ ಹರಿದಾಡಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿವೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತೊರೆದಿದ್ದಾರೆ. ಆದರೂ ಐಪಿಎಲ್‌ನಲ್ಲಿ ಆಡುವ ವರೆಗೂ ಆರ್‌ಸಿಬಿಯಲ್ಲೇ ಇರುವುದಾಗಿ ಅವರು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು