ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL | RR vs SRH: ರಾಜಸ್ಥಾನಕ್ಕೆ 176 ರನ್‌ಗಳ ಗೆಲುವಿನ ಗುರಿ ನೀಡಿದ ಹೈದರಾಬಾದ್

Published 24 ಮೇ 2024, 13:33 IST
Last Updated 24 ಮೇ 2024, 13:33 IST
ಅಕ್ಷರ ಗಾತ್ರ

ಚೆನ್ನೈ: ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಹೈದರಾಬಾದ್‌ ತಂಡ ರಾಜಸ್ಥಾನಕ್ಕೆ 176 ರನ್‌ಗಳ ಗೆಲುವಿನ ಗುರಿ ನೀಡಿದೆ.

ಇಲ್ಲಿನ ಚಿಪಾಕ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. 

ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್‌ ಮಾಡಿತು.

ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 175 ರನ್‌ ಪೇರಿಸಿತು. ರಾಜಸ್ಥಾನ ಈ ಪಂದ್ಯ ಗೆಲ್ಲಬೇಕಾದರೆ 176 ರನ್‌ ಹೊಡೆಯಬೇಕಿದೆ.

ಹೈದರಾಬಾದ್‌ನ ರಾಹುಲ್‌ ತ್ರಿಪಾಠಿ 37, ಹೆಡ್‌ 34, ಕ್ಲಾಸಿನ್‌ 50 ರನ್‌ ಹೊಡೆದು ಗಮನ ಸೆಳೆದರು. ರಾಜಸ್ಥಾನ ಪರ ಬೌಲ್ಟ್‌, ಅವೇಶ್ ಖಾನ್‌ ತಲಾ 3 ವಿಕೆಟ್ ಪಡೆದರು. 

ತಂಡಗಳು...

ಸನ್‌ರೈಸರ್ಸ್: ಹೆಡ್‌, ಅಭಿಷೇಕ್, ಕ್ಲಾಸೆನ್, ನಿತಿಶ್‌ ರೆಡ್ಡಿ, ರಾಹುಲ್‌ ತ್ರಿಪಾಠಿ, ಅಬ್ದುಲ್‌ ಸಮದ್‌, ಶಾಬಾಜ್ ಅಹ್ಮದ್, ಮಯಂಕ್ ಮಾರ್ಕಂಡೆ, ಟಿ.ನಟರಾಜನ್, ಭುವನೇಶ್ವರ ಕುಮಾರ್, ಕಮಿನ್ಸ್, ಉನದ್ಕಟ್

ರಾಜಸ್ಥಾನ ರಾಯಲ್ಸ್‌: ಜೈಸ್ವಾಲ್, ರಿಯಾನ್ ಪರಾಗ್, ಸಂಜು ಸ್ಯಾಮ್ಸನ್, ಧ್ರುವ್ ಜುರೇಲ್, ರೋವ್ಮನ್ ಪೊವೆಲ್,  ಶಿಮ್ರಾನ್ ಹೆಟ್ಮೆಯರ್, ಬೌಲ್ಟ್‌, ರವಿಚಂದ್ರನ್ ಅಶ್ವಿನ್‌, ಚಾಹಲ್‌, ಸಂದೀಪ್‌ ಶರ್ಮಾ, ಅವೇಶ್‌ ಖಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT