ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಟ್ರೋಫಿ ಗೆದ್ದ ತಕ್ಷಣ ತಂಡದ ಮಾಲೀಕತ್ವದ ಬಗ್ಗೆ ಅಭಿಮಾನಿಗಳಲ್ಲಿ ವ್ಯಾಪಕ ಕುತೂಹಲ ಮೂಡಿದೆ.

ಈ ಸಂಬಂಧ ಗೂಗಲ್ನಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ. ಐಪಿಎಲ್ ಪಂದ್ಯದ ವೇಳೆ ಫ್ರಾಂಚೈಸಿ ಮಾಲೀಕರು ವಿಐಪಿ ಗ್ಯಾಲರಿಯಲ್ಲಿ ಕುಳಿತು ತಂಡವನ್ನು ಪ್ರೋತ್ಸಾಹಿಸುವುದು ವಾಡಿಕೆಯಾಗಿದೆ. ಕೋಲ್ಕತ್ತ ನೈಟ್ ರೈಡರ್ಸ್ ಪರ ಶಾರೂಕ್ ಖಾನ್, ಸನ್ರೈಸರ್ಸ್ ಹೈದರಾಬಾದ್ ಪರ ಕಾವ್ಯ ಮಾರನ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ಪ್ರೀತಿ ಜಿಂಟಾ ಹೆಚ್ಚು ಜನಪ್ರಿಯರಾಗಿದ್ದಾರೆ.

ಆದರೆ ಒಂದು ಕಾಲದಲ್ಲಿ ಆರ್ಸಿಬಿ ಪಾಳಯದಲ್ಲಿ ಇದ್ದ ಮಾಲೀಕರ ಸದ್ದು, ಗಮ್ಮತ್ತು ಈಗ ಕಾಣಿಸುತ್ತಿಲ್ಲ. ಅಂದ ಹಾಗೆ ಈಗ ಬ್ರಿಟನ್ನ ಮದ್ಯ ತಯಾರಿಕಾ ಕಂಪನಿ ಡಿಯಾಜಿಯೊ ಆರ್ಸಿಬಿ ತಂಡದ ಮಾಲೀಕತ್ವ ಹೊಂದಿದೆ. ಆ ಕಂಪನಿಯ ಭಾರತದಲ್ಲಿರುವ ಘಟಕವಾದ ಯುನೈಟೆಡ್ ಸ್ಪಿರಿಟ್ಸ್, ತಂಡದ ನಿರ್ವಹಣೆ ನೋಡಿಕೊಳ್ಳುತ್ತಿದೆ.

ಐಪಿಎಲ್ ಆರಂಭವಾದಾಗ ಯುನೈಟೆಡ್ ಸ್ಪಿರಿಟ್ಸ್ನ ಬಾಸ್ ಆಗಿದ್ದ ವಿಜಯ್ ಮಲ್ಯ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಿದ್ದರು. ಅಂದು ಬರೋಬ್ಬರಿ ₹476 ಕೋಟಿ ಪಾವತಿಸಿದ್ದರು. ಅಲ್ಲದೆ ಆರ್ಸಿಬಿ ಐಪಿಎಲ್ನ ಎರಡನೇ ಅತಿ ದುಬಾರಿ ಫ್ರಾಂಚೈಸಿ ಎನಿಸಿತ್ತು.

ಮಲ್ಯ ಅವರ ಯುಬಿ ಗ್ರೂಪ್ ಆರ್ಸಿಬಿಯ ಪ್ರಚಾರ ಭರಾಟೆ ನಡೆಸಿತ್ತು. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ಗೆ ಸೇರಿದ ರಾಯಲ್ ಚಾಲೆಂಜ್ ಹಾಗೂ ಮೆಕ್ಡೊವೆಲ್ಸ್ ನಂ.1 ಬ್ರ್ಯಾಂಡ್ಗಳು ಸ್ಪಷ್ಟವಾಗಿ ಗೋಚರಿಸಿದ್ದವು. ತಂಡದ ಹೆಸರು 'ರಾಯಲ್ ಚಾಲೆಂಜರ್ಸ್' ಸಹ ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ನಿಂದ ಹೊರಹೊಮ್ಮಿದೆ ಎಂದು ಹೇಳಲಾಗುತ್ತಿದೆ. ಯುನೈಟೆಡ್ ಬ್ರೂವರೀಸ್ನ ಕಿಂಗ್ಫಿಶರ್ ಸಹ ಪ್ರಾಯೋಜಕತ್ವದಲ್ಲಿ ಕಾಣಿಸಿಕೊಂಡಿತ್ತು.

ಬಳಿಕ ಬ್ಯಾಂಕ್ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿಜಯ್ ಮಲ್ಯ ದೇಶ ಬಿಟ್ಟು ಪರಾರಿಯಾದ ಬಳಿಕ ಆರ್ಸಿಬಿ ಫ್ರಾಂಚೈಸಿಯ ಸಂಪೂರ್ಣ ನಿಯಂತ್ರಣವನ್ನು ಡಿಯಾಜಿಯೊ ನೇತೃತ್ವದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ವಹಿಸಿಕೊಂಡಿತ್ತು.

ಪ್ರಸ್ತುತ ಆರ್ಸಿಬಿ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇನ್ಸ್ಟಾಗ್ರಾಂನಲ್ಲೂ 2 ಕೋಟಿ ಹಿಂಬಾಲಕರನ್ನು ಹೊಂದಿದೆ. ವಿರಾಟ್ ಕೊಹ್ಲಿ ಪ್ರಮುಖ ತಾರೆಯಾಗಿ ಹೊರಹೊಮ್ಮಿದ್ದಾರೆ.
.ನಾನು RCBಯನ್ನು ಸ್ಥಾಪಿಸಿದಾಗ... ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಭಾವುಕ ಪೋಸ್ಟ್.ಬ್ಯಾಂಕ್ ವಂಚನೆ ಪ್ರಕರಣ: ವಿಜಯ್ ಮಲ್ಯ ಮೇಲ್ಮನವಿ ವಜಾಗೊಳಿಸಿದ ಲಂಡನ್ ಕೋರ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.