ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ನ್ಯೂಜಿಲೆಂಡ್‌ ಪಂದ್ಯ ಮಳೆಯಿಂದ ರದ್ದು| ಮೇಲ್ಚಾವಣಿ ಅಂಗಣ ಉತ್ತಮ: ಗಿಲ್‌

ಭಾರತ–ನ್ಯೂಜಿಲೆಂಡ್‌ ನಡುವಣ ಎರಡನೇ ಏಕದಿನ ಪಂದ್ಯ ಮಳೆಯಿಂದ ರದ್ದು
Last Updated 27 ನವೆಂಬರ್ 2022, 19:05 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌: ಮಳೆಯಿಂದಾಗಿ ಪಂದ್ಯಗಳು ರದ್ದಾಗುವುದು ಆಟಗಾರರಿಗೆ ಮತ್ತು ಟಿಕೆಟ್‌ ಖರೀದಿಸಿ ನೋಡಲು ಬರುವ ಪ್ರೇಕ್ಷಕರಿಗೆ ಕಿರಿಕಿರಿ ಎನಿಸುತ್ತದೆ. ಹೀಗಾಗಿ ಮೇಲ್ಚಾವಣಿ ಸೌಲಭ್ಯ ಹೊಂದಿರುವ ಕ್ರೀಡಾಂಗಣಗಳು ಉತ್ತಮ ಆಯ್ಕೆಯಾಗಬಹುದು ಎಂದು ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಭಾನುವಾರ ಇಲ್ಲಿ ನಡೆಯಬೇಕಿದ್ದ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಯಿತು.

ಈ ಕುರಿತು ಶುಭಮನ್ ಮಾತನಾಡಿದರು.

‘ಒಳಾಂಗಣ ಕ್ರೀಡಾಂಗಣ ಆಯ್ಕೆಯ ಕುರಿತು ಮಂಡಳಿಗಳು ನಿರ್ಧಾರ ತೆಗೆದುಕೊಳ್ಳಬೇಕು‘ ಎಂದು ಶುಭಮನ್ ಹೇಳಿದರು.

ಪಂದ್ಯ ರದ್ದಾದ ವೇಳೆ ಭಾರತ 12.5 ಓವರ್‌ಗಳಲ್ಲಿ 89 ರನ್‌ ಗಳಿಸಿತ್ತು. ಶುಭಮನ್‌ (45) ಮತ್ತು ಸೂರ್ಯಕುಮಾರ್ ಯಾದವ್‌ (34) ಕ್ರೀಸ್‌ನಲ್ಲಿದ್ದರು. ಶಿಖರ್ ಧವನ್‌ ಮೂರು ರನ್ ಗಳಿಸಿ ಔಟಾಗಿದ್ದರು.

ಭಾರತದ ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಮಳೆ ಸುರಿಯಲಾರಂಭಿಸಿತು. ನಾಲ್ಕು ತಾಸುಗಳ ಬಳಿಕ ಎರಡೂ ತಂಡಗಳಿಗೆ ತಲಾ 29 ಓವರ್‌ಗಳನ್ನು ಆಡಿಸಲು ನಿರ್ಧರಿಸಲಾಗಿತ್ತು. ಆದರೆ ಏಳು ಓವರ್‌ಗಳ ಬಳಿಕ ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು.

ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ನವೆಂಬರ್ 30ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT