ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ; ಗೌತಮ್ ಗಂಭೀರ್ ಹೇಳಿದ್ದೇನು?

Published 22 ಜೂನ್ 2024, 2:21 IST
Last Updated 22 ಜೂನ್ 2024, 2:21 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಎಂಬ ಬಗ್ಗೆ ವರದಿಗಳು ಬಂದಿವೆ. ಈ ಕುರಿತು ಮೊದಲ ಬಾರಿಗೆ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.

'ಈ ಸಂದರ್ಭದಲ್ಲಿ ಉತ್ತರಿಸುವುದು ಕಷ್ಟ' ಎಂದು ಅವರು ಹೇಳಿದ್ದಾರೆ.

ಗಂಭೀರ್ ಹೇಳಿಕೆಯನ್ನು ಸುದ್ದಿಸಂಸ್ಥೆ 'ಎಎನ್‌ಐ' ಹಂಚಿಕೊಂಡಿದೆ.

ನಾನು ಭವಿಷ್ಯದ ಬಗ್ಗೆ ತುಂಬಾ ಯೋಚಿಸುತ್ತಿಲ್ಲ. ನೀವು ನನಗೆ ಕಠಿಣವಾದ ಪ್ರಶ್ನೆಗಳನ್ನು ಕೇಳಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಾ ಎಂದು ವರದಿಗಾರರಿಗೆ ನಗುಮುಖದಿಂದಲೇ ಉತ್ತರಿಸಿದ್ದಾರೆ.

'ಈಗ ಇರುವ ಜವಾಬ್ದಾರಿಯನ್ನು (ಕೆಕೆಆರ್ ತಂಡದ ಮೆಂಟರ್) ಆನಂದಿಸುತ್ತಿದ್ದೇನೆ. ಈಗಷ್ಟೇ ಐಪಿಎಲ್‌ನಲ್ಲಿ ಕೆಕೆಆರ್ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಕ್ಷಣವನ್ನು ಆನಂದಿಸೋಣ' ಎಂದು ಹೇಳಿದ್ದಾರೆ.

'ಭವಿಷ್ಯದಲ್ಲಿ ಏನು ನಡೆಯಬೇಕೋ ಅದು ನಡೆಯಲಿದೆ. ಸದ್ಯ ತುಂಬಾ ಖುಷಿಯಲ್ಲಿದ್ದೇನೆ. ಕೋಲ್ಕತ್ತ ಜನರನ್ನು ಖುಷಿಪಡಿಸುವುದೇ ನನ್ನ ಕೆಲಸ. ನೀವು ಖುಷಿಪಟ್ಟರೆ ನನಗೂ ಖುಷಿ' ಎಂದು ಹೇಳಿದ್ದಾರೆ.

ಈಗಾಗಲೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯ ಆಕಾಂಕ್ಷಿಯಾಗಿರುವ ಗಂಭೀರ್ ಅವರನ್ನು ಬಿಸಿಸಿಐ ಸಲಹಾ ಸಮಿತಿಯು ಸಂದರ್ಶನ ನಡೆಸಿದೆ. ಈ ಮೊದಲು ಟೀಮ್ ಇಂಡಿಯಾದ ಕೋಚ್ ಆಗಲು ಇಷ್ಟ ಎಂದು ಗಂಭೀರ್ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT