ಬ್ರಿಸ್ಬೇನ್: ಭಾರತ ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿರುವ ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದಾರೆ.

ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ. ನಾಲ್ಕನೇ ದಿನದಾಟದ ಪಂದ್ಯದ ಆರಂಭಕ್ಕೂ ಮುನ್ನ ಅಭ್ಯಾಸದ ವೇಳೆ ಹ್ಯಾಜಲ್ವುಡ್ ಬಲಗಾಲಿನ ಹಿಂಭಾಗದಲ್ಲಿ ನೋವು ಉಲ್ಬಣಗೊಂಡಿದೆ.

ಇದರಿಂದಾಗಿ ಪ್ರಸ್ತುತ ಸಾಗುತ್ತಿರುವ ಪಂದ್ಯದಲ್ಲೂ ಆಸ್ಟ್ರೇಲಿಯಾಕ್ಕೆ ಓರ್ವ ಬೌಲರ್ನ ಕೊರತೆ ಕಾಡುತ್ತಿದೆ.

ಗಾಯದ ಸಮಸ್ಯೆಯಿಂದಾಗಿ ಅಡಿಲೇಡ್ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಹ್ಯಾಜಲ್ವುಡ್ ಆಡಿರಲಿಲ್ಲ. ಮೂರನೇ ಪಂದ್ಯದ ವೇಳೆ ತಂಡಕ್ಕೆ ಪುನರಾಗಮನ ಮಾಡಿಕೊಂಡಿದ್ದರು.

ಈ ಪಂದ್ಯದಲ್ಲಿ ಆರು ಓವರ್ ಮಾತ್ರ ಎಸೆದಿದ್ದರೂ ವಿರಾಟ್ ಕೊಹ್ಲಿ ಅವರ ಮಹತ್ವದ ವಿಕೆಟ್ ಪಡೆಯುವಲ್ಲಿ ಹ್ಯಾಜಲ್ವುಡ್ ಯಶಸ್ವಿಯಾಗಿದ್ದರು. ಆದರೆ ಗಾಯದಿಂದಾಗಿ ನಾಲ್ಕನೇ ದಿನದಾಟದಲ್ಲಿ ಬೌಲಿಂಗ್ ಮಾಡಲು ಮೈದಾನಕ್ಕಿಳಿಯಲಿಲ್ಲ.

ಹ್ಯಾಜಲ್ವುಡ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ.

ಅಡಿಲೇಡ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸ್ಕಾಟ್ ಬೋಲ್ಯಾಂಡ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
.ರಾಹುಲ್, ಜಡೇಜ ಫಿಫ್ಟಿ; ಕೊನೆಯಲ್ಲಿ ಆಕಾಶ್ ಮಿಂಚು: ಫಾಲೋ ಆನ್ ತಪ್ಪಿಸಿದ ಭಾರತ.ಗಾಬಾ ಟೆಸ್ಟ್: ಮಳೆಯಲಿ ಕಳೆಗುಂದಿದ ರೋಹಿತ್ ಪಡೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.