ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ, ಯುವಿಯಂತೆ ಭಾರತಕ್ಕೆ ಗೆಲುವು ತಂದುಕೊಡಲಿದೆ ಪಂತ್–ಪಾಂಡ್ಯ ಜೋಡಿ: ಗವಾಸ್ಕರ್

ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ನಡೆದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಭಾರತ ತಂಡ 2–1 ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಷಭ್‌ ಪಂತ್‌ ಹಾಗೂ ಹಾರ್ದಿಕ್‌ ಪಾಂಡ್ಯ ಆಟಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 259 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಸವಾಲಿನ ಗುರಿ ಬೆನ್ನತ್ತಿದ ಭಾರತ 72 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ತಲಾ 17 ರನ್ ಗಳಿಸಿ ಔಟಾದರೆ, ಶಿಖರ್‌ ಧವನ್‌ 1 ರನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ 16 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡಿದ್ದರು.

ಈ ಹಂತದಲ್ಲಿ ಜೊತೆಯಾದ ಪಂತ್‌ ಹಾಗೂ ಪಾಂಡ್ಯ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ133 ರನ್‌ ಕೆಲಹಾಕಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು. ಪಾಂಡ್ಯ 55 ಎಸೆತಗಳಲ್ಲಿ 71 ರನ್‌ ಬಾರಿಸಿದರೆ, ಅಜೇಯ ಆಟವಾಡಿದ ಪಂತ್‌ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ (125 ರನ್‌) ಸಿಡಿಸಿ ಸಂಭ್ರಮಿಸಿದರು.

ಈ ಕುರಿತು 'ಸ್ಪೋರ್ಟ್ಸ್‌ ಟಾಕ್‌' ಯುಟ್ಯೂಬ್‌ ಚಾನೆಲ್‌ನೊಂದಿಗೆ ಮಾತನಾಡಿರುವ ಗವಾಸ್ಕರ್‌, ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಹಾಗೂ ಯುವರಾಜ್ ಸಿಂಗ್ ಅವರಂತೆ ಪಂತ್‌, ಪಾಂಡ್ಯ ಜೋಡಿ ಭಾರತಕ್ಕೆ ಇನ್ನಷ್ಟು ಪಂದ್ಯಗಳನ್ನು ಗೆದ್ದುಕೊಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಧೋನಿ ಹಾಗೂ ಯುವರಾಜ್‌ ಜೋಡಿಯ ಯಶಸ್ಸನ್ನು ಪಂತ್‌ ಹಾಗೂ ಪಾಂಡ್ಯ ಜೋಡಿ ಮುಂದುವರಿಸಬಲ್ಲದೇ ಎಂದು ಕೇಳಿದ ಪ್ರಶ್ನಗೆ ಉತ್ತರಿಸಿದ ಗವಾಸ್ಕರ್‌, ಖಂಡಿತಾ ಇದು ಸಾಧ್ಯವಾಗಬಹುದು. ಧೋನಿ, ಯುವಿ ಇನಿಂಗ್ಸ್‌ಗೆ ಸ್ಥಿರತೆ ನೀಡುತ್ತಿದ್ದ ರೀತಿಯೇ, ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದ ಹಾಗೆಯೇ, ಪಂತ್‌ ಹಾಗೂ ಪಾಂಡ್ಯ ಜೋಡಿ ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆಲ್ಲಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

2005 ರಿಂದ 2017ರ ವರೆಗೆ ಧೋನಿ ಮತ್ತು ಯುವರಾಜ್‌ ಹಲವು ಪಂದ್ಯಗಳನ್ನು ಜೊತೆಯಾಗಿ ಗೆಲ್ಲಿಸಿಕೊಟ್ಟಿದ್ದರು. ಈ ಜೋಡಿ ಏಕದಿನ ಕ್ರಿಕೆಟ್‌ನ 67 ಇನಿಂಗ್ಸ್‌ಗಳಲ್ಲಿ 51.73ರ ಸರಾಸರಿಯಲ್ಲಿ 3,105 ರನ್‌ ಕಲೆಹಾಕಿದೆ. ಇದರಲ್ಲಿ 10 ಶತಕ ಹಾಗೂ 13 ಅರ್ಧಶತಕದ ಜೊತೆಯಾಟಗಳೂ ಸೇರಿದ್ದವು. ಧೋನಿ, ಯುವಿ 2017ರಲ್ಲಿಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ 4ನೇ ವಿಕೆಟ್‌ಗೆ ಅಜೇಯ 256 ರನ್‌ ಕಲೆಹಾಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT