ಭಾನುವಾರ, ಜನವರಿ 17, 2021
18 °C

New Zealand vs Pakistan| ಕೇನ್ ದ್ವಿಶತಕ: ಹೆನ್ರಿ ಶತಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್‌ಚರ್ಚ್: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಈಚೆಗೆ ಅಗ್ರಸ್ಥಾನಕ್ಕೇರಿರುವ ಖುಷಿಯಲ್ಲಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪಾಕಿಸ್ತಾನ ಎದುರಿನ  ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದರು.

ಪಾಕ್ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಅವರು ಇಲ್ಲಿ 364 ಎಸೆತಗಳಲ್ಲಿ 238 ರನ್‌ ಗಳಿಸಿದರು. ಹೆನ್ರಿ ನಿಕೋಲ್ಸ್‌ (157 ) ಮತ್ತು ಡೆರಿಲ್ ಮಿಚೆಲ್ (102) ಅವರ ಶತಕಗಳ ಬಲದಿಂದ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 659 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 362 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ಬಳಗವು ಮೂರನೇ ದಿನದಾಟದ ಅಂತ್ಯಕ್ಕೆ  1 ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿದೆ.

ಕೇನ್ ವಿಲಿಯಮ್ಸನ್ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು ಏಳು ಸಾವಿರ ರನ್‌ ಗಳಿಸಿದ ಸಾಧನೆಯನ್ನೂ ಈ ಸಂದರ್ಭದಲ್ಲಿ ಮಾಡಿದರು.

ಈ ಪಂದ್ಯದಲ್ಲಿ ಅವರು ಹೆನ್ರಿ ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 369 ರನ್‌ಗಳನ್ನು ಕಲೆಹಾಕಿದರು. ಆಲ್‌ರೌಂಡರ್ ಡೆರಿಲ್ ಮಿಚೆಲ್ ಕೂಡ ಅಬ್ಬರದ ಶತಕ ಸಿಡಿಸಿದರು. ಆಲ್‌ಬ್ಲ್ಯಾಕ್ ರಗ್ಬಿ ತಂಡದ ಕೋಚ್ ಮತ್ತು ಸದ್ಯ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿರುವ ಜಾನ್ ಮಿಚೆಲ್ ಅವರ ಮಗನಾಗಿರುವ ಡೆರಿಲ್‌ಗೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ.  

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 297, ನ್ಯೂಜಿಲೆಂಡ್: 158.5 ಓವರ್‌ಗಳಲ್ಲಿ 6ಕ್ಕೆ659 ಡಿಕ್ಲೇರ್ಡ್ (ಕೇನ್ ವಿಲಿಯಮ್ಸನ್ 238, ಹೆನ್ರಿ ನಿಕೋಲ್ಸ್‌ 157, ಡೆರಿಲ್ ಮಿಚೆಲ್  ಔಟಾಗದೆ 102, ಕೈಲ್ ಜೆಮಿಸನ್ ಔಟಾಗದೆ 30, ಶಾಹೀನ್ ಆಫ್ರಿದಿ 101ಕ್ಕೆ2, ಮೊಹಮ್ಮದ್ ಅಬ್ಬಾಸ್ 98ಕ್ಕೆ2, ಫಹೀನ್ ಅಶ್ರಫ್ 106ಕ್ಕೆ2) ಎರಡನೇ ಇನಿಂಗ್ಸ್: ಪಾಕಿಸ್ತಾನ: 11 ಓವರ್‌ಗಳಲ್ಲಿ 1 ವಿಕೆಟ್‌ಗೆ 8 (ಅಬಿದ್ ಅಲಿ ಬ್ಯಾಟಿಂಗ್ 7, ಮೊಹಮ್ಮದ್ ಅಬ್ಬಾಸ್ ಬ್ಯಾಟಿಂಗ್ 1)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು