ಬೆಂಗಳೂರು:’ಕರ್ನಾಟಕದ ಕ್ರೀಡಾಪಟುಗಳು ತುಂಬಾ ಸಭ್ಯರು. ಆಟದಲ್ಲಿಯಂತೂ ಅವರೆಲ್ಲರೂ ಉತ್ತಮರು. ವ್ಯಕ್ತಿತ್ವದಲ್ಲಿಯೂ ಶ್ರೇಷ್ಠರು. ಬೇರೆಯವರಿಗೆಮಾದರಿಯಾಗುವಂತವರು‘ ಎಂದು ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಶ್ಲಾಘಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದ ಕುರಿತು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ವಿಶ್ಷೇಷಣೆ ಮಾಡುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. 1999ರ ಫೆಬ್ರುವರಿ 7ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್ ನ ಒಂದೇ ಇನಿಂಗ್ಸ್‌ನಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ 10 ವಿಕೆಟ್‌ಗಳನ್ನು ಗಳಿಸಿ ದಾಖಲೆ ಬರೆದಿದ್ದರು. ಆ ಸಾಧನೆಯನ್ನು ನೆನಪಿಸಿಕೊಂಡ ಗಾವಸ್ಕರ್, ಕರ್ನಾಟಕದ ಕ್ರೀಡಾಪಟುಗಳನ್ನು ಶ್ಲಾಘಿಸಿದರು. ಅವರ ಈ ಸಂಭಾಷಣೆಯ ವಿಡಿಯೊ ತುಣಕುಗಳು ಟ್ವಿಟರ್, ಫೇಸ್‌ಬುಕ್‌ನಲ್ಲಿ ಬಹಳಷ್ಟು ಜನರು ಹಂಚಿಕೊಂಡಿದ್ದಾರೆ. ಅಪಾರ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.