ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿ: ಕರ್ನಾಟಕದ ಗೆಲುವಿನ ಓಟ

Last Updated 2 ಮಾರ್ಚ್ 2022, 14:42 IST
ಅಕ್ಷರ ಗಾತ್ರ

ಬೆಂಗಳೂರು: ಗಂಗಾ (71) ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಇಂಡಸ್‌ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ಎಂಟು ವಿಕೆಟ್‌ಗಳಿಂದ ಜಯಿಸಿತು.

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮಹಿಳೆಯರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಗುಜರಾತ್ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 151 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಕರ್ನಾಟಕದ ಮಹಿಳೆಯರು 14.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದರು.

ಆತಿಥೇಯ ತಂಡದ ಪರ ತಂಡದ ಗಂಗಾ ಹಾಗೂ ವರ್ಷಾ ಯು. (38) ಉತ್ತಮ ಬ್ಯಾಟಿಂಗ್ ಮಾಡಿದರು.

ಗುಜರಾತ್ ಪರ ತಾಕುಬೆನ್ ಕುಕಡಿಯಾ (69) ಹಾಗೂ ಮೀನಾಬೆನ್ ಕೊತ್ವಾಲ್ (34) ಮಿಂಚಿದರು.

ಇನ್ನುಳಿದ ಪಂದ್ಯಗಳಲ್ಲಿ ಒಡಿಶಾ ತಂಡವು 66 ರನ್‌ಗಳಿಂದ ಮಧ್ಯಪ್ರದೇಶ ಎದುರು, ಜಾರ್ಖಂಡ್‌ ತಂಡವುಒಂಬತ್ತು ವಿಕೆಟ್‌ಗಳಿಂದ ಪಶ್ಚಿಮ ಬಂಗಾಳ ವಿರುದ್ಧ, ಹರಿಯಾಣ ವಿರುದ್ಧ ಮಹಾರಾಷ್ಟ್ರ ತಂಡವು 10 ವಿಕೆಟ್‌ಗಳಿಂದ ಜಯ ಸಾಧಿಸಿದವು.

ಸಂಕ್ಷಿಪ್ತ ಸ್ಕೋರ್:ಗುಜರಾತ್ ಮಹಿಳೆಯರು: 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 151 (ತಾಕುಬೆನ್ ಕುಕಡಿಯಾ 69, ಮೀನಾಬೆನ್ 34, ಸುನಿತಾ ದೊಂಡಪ್ಪನವರ್ 12 ಕ್ಕೆ1).

ಕರ್ನಾಟಕ ಮಹಿಳೆಯರು: 14.2 ಓವರ್‌ಗಳಲ್ಲಿ 152 (ಗಂಗಾ 71, ವರ್ಷಾ ಯು. 38; ಪುರಿಬೆನ್ ಬಾಬುಜಿ 27ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT