ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಣಿ, ಶೀನ್‌ ತಂಡಗಳ ಜಯಭೇರಿ

ಫಾಲ್ಕನ್ ಕ್ಲಬ್ ಸುವರ್ಣ ಮಹೋತ್ಸವ ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿ
Last Updated 5 ಜನವರಿ 2021, 14:35 IST
ಅಕ್ಷರ ಗಾತ್ರ

ಬೆಂಗಳೂರು: ಕಿಣಿ ಆರ್. ಆರ್‌. ಸ್ಪೋರ್ಟ್ಸ್ ಹಾಗೂ ಶೀನ್ ಸ್ಪೋರ್ಟ್ಸ್ ತಂಡಗಳು ಫಾಲ್ಕನ್ ಸ್ಪೋರ್ಟ್ಸ್‌ ಕ್ಲಬ್‌ನ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಮಹಿಳೆಯರ ಟಿ20 ಟೂರ್ನಿಯಲ್ಲಿ ಮಂಗಳವಾರ ಜಯ ಗಳಿಸಿದವು. ಮೊದಲ ಪಂದ್ಯದಲ್ಲಿ ಕಿಣಿ ಸ್ಪೋರ್ಟ್ಸ್ ತಂಡವು ಕೇವಲ ಒಂದು ರನ್‌ನಿಂದ ಹೆರಾನ್ಸ್ ಸ್ಪೋರ್ಟ್ಸ್ ವಿರುದ್ಧ ಜಯ ಗಳಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಣಿ ತಂಡವು, ವನಿತಾ ವಿ.ಆರ್. (48, 35 ಎಸೆತ) ಹಾಗೂ ಪೂನಂ ರಾವತ್ (29) ಅವರ ಬ್ಯಾಟಿಂಗ್ ಬಲದಿಂದ 130 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಈ ಜೋಡಿ 64 ರನ್ ಕಲೆಹಾಕಿತು. ಎದುರಾಳಿ ತಂಡದ ಸ್ಪಿನ್ನರ್‌ ಮಿನ್ನು ಮಣಿ (18ಕ್ಕೆ 4) ಬೌಲಿಂಗ್‌ನಲ್ಲಿ ಮಿಂಚಿದರು.

ಉತ್ತರವಾಗಿ ಬ್ಯಾಟ್ ಮಾಡಿದ ಹೆರಾನ್ಸ್ ತಂಡವು 129 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕಿಣಿ ತಂಡದ ಅರುಂಧತಿ ರೆಡ್ಡಿ ಮೂರು ವಿಕೆಟ್ ಕಿತ್ತರು.

ಇನ್ನೊಂದು ಪಂದ್ಯದಲ್ಲಿ ಶೀನ್ ತಂಡವು 8 ವಿಕೆಟ್‌ಗಳಿಂದ ಅಮೇಯ ತಂಡದ ವಿರುದ್ಧ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ಅಮೇಯ ಕೇವಲ 102 ರನ್‌ಗಳಿಗೆ ಪತನವಾಯಿತು. ತಿರುಶ್ ಕಾಮಿನಿ (26) ಹಾಗೂ ಮೋನಾ ಮೆಶ್ರಾಮ್‌ (28) ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು. ನಾಯಕಿ ರಕ್ಷಿತಾ ಕೃಷ್ಣಪ್ಪ (15ಕ್ಕೆ3) ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್‌ (20ಕ್ಕೆ 2) ಅಮೇಯ ತಂಡದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.

ಸಾಧಾರಣ ಗುರಿ ಬೆನ್ನತ್ತಿದ ಶೀನ್ ತಂಡವು 19 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಜಯ ಗಳಿಸಿತು. ಜೆಮಿಮಾ ರಾಡ್ರಿಗಸ್‌ (48) ಹಾಗೂ ವೃಂದಾ ದಿನೇಶ್ (31) ಗೆಲುವು ಸರಳಗೊಳಿಸಿದರು.

ಸಂಕ್ಷಿಪ್ತ ಸ್ಕೋರುಗಳು: ಕಿಣಿ ಆರ್. ಆರ್‌. ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 130 (ವನಿತಾ ವಿ.ಆರ್‌. 48, ಪೂನಂ ರಾವತ್‌ 29; ಮಿನ್ನು ಮಣಿ 18ಕ್ಕೆ 4, ದಿವ್ಯಜ್ಞಾನಾನಂದ 27ಕ್ಕೆ 3). ಹೆರಾನ್ಸ್ ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 129 (ಆಯುಷ್‌ ಸೋನಿ 47, ಮಿನ್ನು ಮಣಿ 23, ಅದಿತಿ ರಾಜೇಶ್‌ ಔಟಾಗದೆ 23, ಅರುಂಧತಿ ರೆಡ್ಡಿ 22ಕ್ಕೆ 3). ಫಲಿತಾಂಶ: ಕಿಣಿ ಆರ್‌.ಆರ್‌. ಸ್ಪೋರ್ಟ್ಸ್ ತಂಡಕ್ಕೆ 1 ರನ್‌ ಜಯ. ಪಂದ್ಯ ಶ್ರೇಷ್ಠ ಆಟಗಾರ್ತಿ: ಮಿನ್ನು ಮಣಿ

ಅಮೇಯ ಸ್ಪೋರ್ಟ್ಸ್: 19.1 ಓವರ್‌ಗಳಲ್ಲಿ 102 (ತಿರುಶ್ ಕಾಮಿನಿ 26, ಮೋನಾ ಮೆಶ್ರಾಮ್‌ 28; ರಾಜೇಶ್ವರಿ ಗಾಯಕವಾಡ್‌ 20ಕ್ಕೆ 2, ರಕ್ಷಿತಾ ಕೃಷ್ಣಪ್ಪ 15ಕ್ಕೆ 3). ಶೀನ್‌ ಸ್ಪೋರ್ಟ್ಸ್: 19 ಓವರ್‌ಗಳಲ್ಲಿ 2 ವಿಕೆಟ್‌ಗೆ 107 (ಜೆಮಿಮಾ ರಾಡ್ರಿಗಸ್‌ 48, ವೃಂದಾ ದಿನೇಶ್‌ 31, ರಕ್ಷಿತಾ ಕೃಷ್ಣಪ್ಪ ಔಟಾಗದೆ 21). ಫಲಿತಾಂಶ: ಶೀನ್ ಸ್ಪೋರ್ಟ್ಸ್ ತಂಡಕ್ಕೆ 8 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ ಆಟಗಾರ್ತಿ: ಜೆಮಿಮಾ ರಾಡ್ರಿಗಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT