ಗುರುವಾರ , ಫೆಬ್ರವರಿ 27, 2020
19 °C

ರಾಹುಲ್‌ಗೆ 'ಹೃದಯ' ಕೊಟ್ಟ ಅಥಿಯಾ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ತಾರೆ ಸುನಿಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಅವರ ‘ಸ್ನೇಹ’ದ ಕುರಿತು ಈಗಾಗಲೇ ಬಹಳಷ್ಟು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ, ಶನಿವಾರ ರಾಹುಲ್ ಇನ್‍ಸ್ಟಾಗ್ರಾಮ್‍ ನಲ್ಲಿ ಹಾಕಿರುವ ಚಿತ್ರವೊಂದಕ್ಕೆ ಸ್ವತಃ ಅಥಿಯಾವರು ‘ಹೃದಯ’ ಗುರುತಿನ ಎಮೊಜಿ ಹಾಕಿರುವುದು ಸಖತ್ ಸುದ್ದಿಯಾಗಿದೆ. ಪಬ್ಲಿಕ್ ಫೋನ್ ಬೂತ್‌ನಲ್ಲಿ ಮಾತನಾಡುತ್ತಿರುವ ರಾಹುಲ್ ಮತ್ತು ಅವರೊಂದಿಗೆ ಅಥಿಯಾ ಇರುವ ಚಿತ್ರ ಇದಾಗಿದೆ. ಈ ಚಿತ್ರವನ್ನು ಹಾಕಿರುವ ರಾಹುಲ್ ‘ಹಲೋ ದೇವಿಪ್ರಸಾದ್..’ ಎಂಬ ಒಕ್ಕಣೆ ಬರೆದಿದ್ದಾರೆ.

ಇದು ಸುನಿಲ್ ಶೆಟ್ಟಿ ಅಭಿನಯದ ಹೆರಾಪೇರಿ ಚಿತ್ರದ ಅಣಕು ಚಿತ್ರವಾಗಿದೆ. ಆದ್ದರಿಂದ ಕ್ರಿಕೆಟಿಗರೂ ಸೇರಿದಂತೆ ಹಲವಾರು ಅಭಿಮಾನಿಗಳು ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ಹಾಕಿದ್ದಾರೆ. ಸ್ವತಃ ಸುನೀಲ್ ಶೆಟ್ಟಿಯವರೇ ನಗುವ ಎಮೊಜಿ ಹಾಕಿದ್ದಾರೆ.

ರಾಹುಲ್ ರಾಜ್‌ಕೋಟ್ ಪಂದ್ಯದಲ್ಲಿ ಆಲ್‌ರೌಂಡ್ ಆಟವಾಡಿ, ಪಂದ್ಯಶ್ರೇಷ್ಠರಾಗಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಗಳಿಸಿದ ಸಾಧನೆಯನ್ನೂ ಮಾಡಿದ್ದರು.

 
 
 
 
 
 
 
 
 
 
 
 
 

Hello, devi prasad....?

A post shared by KL Rahul👑 (@rahulkl) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು