ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಲ್‌.ರಾಹುಲ್ 13 ರನ್‌!

Last Updated 27 ಜನವರಿ 2019, 20:15 IST
ಅಕ್ಷರ ಗಾತ್ರ

ತಿರುವನಂತಪುರ: ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತಾಗಿದ್ದ ಕೆ.ಎಲ್‌.ರಾಹುಲ್ ಶಿಕ್ಷೆ ಮುಗಿದು ಮೊದಲ ಪಂದ್ಯದಲ್ಲಿ 13 ರನ್‌ ಗಳಿಸಿ ಔಟಾಗಿದ್ದಾರೆ. ಇಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ಎದುರಿನ ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ‘ಎ’ ತಂಡದ ಪರವಾಗಿ ಕಣಕ್ಕೆ ಇಳಿದ ಅವರು ನೀರಸ ಬ್ಯಾಟಿಂಗ್ ಮಾಡಿದರು. ಆದರೂ ತಂಡ 60 ರನ್‌ಗಳಿಂದ ಗೆದ್ದು 3–0 ಮುನ್ನಡೆ ಸಾಧಿಸಿತು.

ಮೊದಲ ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡ ಕೇವಲ 172 ರನ್ ಗಳಿಸಿತ್ತು. ಆದರೆ ಎದುರಾಳಿ ತಂಡವನ್ನು 112 ರನ್‌ಗಳಿಗೆ ನಿಯಂತ್ರಿಸಿ ಗೆಲುವು ಸಾಧಿಸಿತು. ರಾಹುಲ್‌ 25 ಎಸೆತಗಳನ್ನು ಎದುರಿಸಿದ್ದರು. ಎರಡು ಬೌಂಡರಿಗಳನ್ನು ಗಳಿಸಿದರೂ ಉಳಿದಂತೆ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಅವರಿಗೆ ಸಾಧ್ಯವಾಗಲಿಲ್ಲ. ಜೆಮಿ ಓವರ್ಟನ್‌ ಎಸೆತದಲ್ಲಿ ಜಕಾರಿಯಾ ಚಾಪೆಲ್‌ಗೆ ಕ್ಯಾಚ್ ನೀಡಿ ಮರಳಿದರು.

ಸಂಕ್ಷಿಪ್ತ ಸ್ಕೋರು: ಭಾರತ ಎ: 47.1 ಓವರ್‌ಗಳಲ್ಲಿ 172 (ದೀಪಕ್ ಚಾಹರ್‌ 39, ಇಶಾನ್ ಕಿಶನ್‌ 30, ಕೃಣಾಲ್ ಪಾಂಡ್ಯ 21; ಜೆಮಿ ಓವರ್ಟನ್‌ 34ಕ್ಕೆ3); ಇಂಗ್ಲೆಂಡ್‌ ಲಯನ್ಸ್‌: 30.5 ಓವರ್‌ಗಳಲ್ಲಿ 112 (ಬೆನ್‌ ಡಕೆಟ್‌ 39, ಒಲೀ ಪಾಪ್‌ 27; ಕೃಣಾಲ್ ಪಾಂಡ್ಯ 21ಕ್ಕೆ4, ಅಕ್ಷರ್ ಪಟೇಲ್‌ 26ಕ್ಕೆ2). ಫಲಿತಾಂಶ: ಭಾರತ ‘ಎ’ ತಂಡಕ್ಕೆ 60 ರನ್‌ಗಳ ಜಯ; ಐದು ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT