ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಮನೆಯಲ್ಲಿದ್ದೇ ₹ 3.6 ಕೋಟಿ ಗಳಿಸಿದ ವಿರಾಟ್!

ಇನ್ಸ್ಟಾಗ್ರಾಮ್‌ ಪೋಸ್ಟ್‌ಗಳಿಂದ ಹಣ ಗಳಿಸಿದವರ ಟಾಪ್ ಟೆನ್ ಪಟ್ಟಿಯಲ್ಲಿ ಭಾರತ ತಂಡದ ನಾಯಕ
Last Updated 5 ಜೂನ್ 2020, 19:45 IST
ಅಕ್ಷರ ಗಾತ್ರ

ಲಂಡನ್: ಕೊರೊನಾ ವೈರಸ್ ಸೋಂಕು ತಡೆಯಲು ಭಾರತದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಚಟುವಟಿಕೆಯಿಂದ ಇದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗಳಿಸಿದ ಹಣವೇಷ್ಟು ಗೊತ್ತೇ?

ಮಾರ್ಚ್ 12 ರಿಂದ ಮೇ 14ರ ಅವಧಿಯಲ್ಲಿ ಇಅವರು ಇನ್ಸ್ಟಾಗ್ರಾಮ್‌ ಪ್ರಾಯೋಜಿತ ಪೋಸ್ಟ್‌ಗಳಿಂದ ಸುಮಾರು ₹ 3.6 ಕೋಟಿ ಗಳಿಸಿದ್ದಾರೆ. ಈ ಅವಧಿಯಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಮಿಂಚಿದ ಅಗ್ರ ಹತ್ತು ಕ್ರೀಡಾಪಟುಗಳಲ್ಲಿ ಆರನೇ ಸ್ಥಾನವನ್ನೂ ಗಳಿಸಿದ್ದಾರೆ. ಈ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ ಕೂಡ ಅವರಾಗಿದ್ದಾರೆ.

ಪೋರ್ಚುಗಲ್‌ನ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (₹17.28 ಕೋಟಿ) ಮೊದಲ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನಾದ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ (₹ 11.52 ಕೋಟಿ ) ಮತ್ತು ನೇಮರ್ (₹ 10.56 ಕೋಟಿ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಬ್ಯಾಸ್ಕೆಟ್‌ಬಾಲ್ ತಾರೆ ಶಕೀಲ್ ಓ ನೀಲ್ (₹ 5.6 ಕೋಟಿ) ಮತ್ತು ಇಂಗ್ಲೆಂಡ್ ಫುಟ್‌ಬಾಲ್ ತಂಡದ ಡೇವಿಡ್ ಬೆಕಮ್ (₹ 3.88 ಕೋಟಿ) ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಸ್ವೀಡನ್‌ನ ಫುಟ್‌ಬಾಲ್ ಆಟಗಾರ ಝಾಟನ್ ಇಬ್ರಾಹಿಮೊವಿಚ್ (₹ 1.75ಕೋಟಿ), ಎನ್‌ಬಿಎ ಆರೆ ಡ್ವೇನ್ ವೇಡ್ (₹ 1.37ಕೋಟಿ), ಬ್ರೆಜಿಲ್ ಫುಟ್‌ಬಾಲ್ ಆಟಗಾರ ಡಾನಿ ಅಲ್ವೆಸ್ (₹ 1.28 ಕೋಟಿ)ಮತ್ತು ಬಾಕ್ಸಿಂಗ್ ಪಟು ಅಂತೋನಿ ಜೊಶುವಾ (₹1.16 ಕೋಟಿ) ಕ್ರಮವಾಗಿ ಆರರಿಂದ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರು ಈಚೆಗೆ ಫೋರ್ಬ್ಸ್‌ ಪ್ರಕಟಿಸಿದ್ದ ವಿಶ್ವದ 100 ಶ್ರೀಮಂತ ಆಟಗಾರರ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದರು. ಕೊರೊನಾ ವೈರಸ್ ಸೋಂಕು ತಡೆಗೆ ಕಳೆದ ಎರಡೂವರೆ ತಿಂಗಳುಗಳಿಂದ ದೇಶದಲ್ಲಿ ಲಾಕ್‌ಡೌನ್ ಇದೆ. ಅದರಿಂದಾಗಿ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆದಿಲ್ಲ. ಬಹುತೇಕಎಲ್ಲ ಕ್ರಿಕೆಟ್ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT