’ಧೋನಿ ಜೀ, ನಿವೃತ್ತಿ ಯೋಚನೆ ನಿಮ್ಮತ್ತ ಸುಳಿಯಲು ಬಿಡದಿರಿ’–ಲತಾ ಮಂಗೇಶ್ಕರ್ ಮನವಿ

ಭಾನುವಾರ, ಜೂಲೈ 21, 2019
28 °C
#donotretiredhoni ಟ್ವಿಟರ್‌ ಟ್ರೆಂಡಿಂಗ್‌

’ಧೋನಿ ಜೀ, ನಿವೃತ್ತಿ ಯೋಚನೆ ನಿಮ್ಮತ್ತ ಸುಳಿಯಲು ಬಿಡದಿರಿ’–ಲತಾ ಮಂಗೇಶ್ಕರ್ ಮನವಿ

Published:
Updated:

ಬೆಂಗಳೂರು: ’ನಿವೃತ್ತಿಯ ಯೋಚನೆಯನ್ನೂ ನಿಮ್ಮತ್ತ ಸುಳಿಯಲು ಬಿಡಬೇಡಿ, ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ಇದು ನನ್ನ ಮನವಿಯೂ ಸಹ...’ –ಎಂ.ಎಸ್‌.ಧೋನಿ ನಿವೃತ್ತಿ ಘೋಷಿಸದಂತೆ ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಮಾಡಿರುವ ಮನವಿ ಇದು. 

ಟೀಂ ಇಂಡಿಯಾದ ವಿಕೆಟ್ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ರನ್‌ಔಟ್‌ ಆಗುತ್ತಿದ್ಧಂತೆ ವಿಶ್ವಕಪ್‌ ಟೂರ್ನಿಯ ಫೈನಲ್‌ ಪ್ರವೇಶಿಸುವ ಕನಸು ದಿಢೀರನೆ ಕಮರಿ ಹೋಯಿತು. ಟೂರ್ನಿಯಿಂದ ಭಾರತ ತಂಡ ಹೊರಬಿದ್ದ ಬೆನ್ನಲೇ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿಯ ಚರ್ಚೆ ಮುನ್ನೆಲೆ ಬಂದಿದೆ. ಧೋನಿ ನಿವೃತ್ತಿ ಘೋಷಿಸಬಾರದು ಎಂದು ಕ್ರಿಕೆಟ್‌ ಪ್ರಿಯರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಸಿದ್ದಾರೆ. ಡುನಾಟ್‌ ರಿಟೈರ್‌ ಧೋನಿ (#donotretiredhoni) ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. 

ಭಾರತ ತಂಡದ ಮಾಜಿ ನಾಯಕ ಎಂಎಸ್‌ಡಿ ವಿಶ್ವಕಪ್‌ ಮುಗಿಯುತ್ತಿದ್ದಂತೆ ನಿವೃತ್ತಿ ಘೋಷಿಸಬಹುದೆಂಬ ಚರ್ಚೆ ವಿಸ್ತರಿಸುತ್ತಿದ್ದು, ಭಾವನಾತ್ಮಕ ಬರಹಗಳ ಮೂಲಕ ನೆಚ್ಚಿನ ಕ್ರಿಕೆಟಿಗನಿಗೆ ನಿವೃತ್ತಿಯ ಯೋಚನೆ ಮಾಡದಂತೆ ಪರಿಪರಿಯಾಗಿ ವಿನಂತಿಸುತ್ತಿದ್ದಾರೆ. ಲತಾ ಮಂಗೇಶ್ಕರ್‌ರಂತಹ ಜನಪ್ರಿಯರು ಸೇರಿದಂತೆ ಬಹುತೇಕರು ಟ್ವಿಟರ್‌ನಲ್ಲಿ ಆಟದಿಂದ ಹೊರ ನಡೆಯದಂತೆ ಕೇಳುತ್ತಿದ್ದಾರೆ. 

ನ್ಯೂಜಿಲೆಂಡ್‌ ಎದುರಿನ ಪಂದ್ಯದ ಬಳಿಕ ಧೋನಿ ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಯಕ ವಿರಾಟ್‌ ಕೊಹ್ಲಿ, ನಿವೃತ್ತಿ ಕುರಿತು ತಂಡಕ್ಕೆ ಧೋನಿ ಏನನ್ನೂ ತಿಳಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದರು. 

ಧೋನಿಯ ಸಾಧನೆಗಳು, ಅಂಕಿ ಅಂಶ, ಚಿತ್ರಗಳು, ವಿಡಿಯೊ,..ಹೀಗೆ ಸಾಕಷ್ಟು ಸರಿಸಿದಷ್ಟೂ ಸಿಗುವ ಧೋನಿ ಕುರಿತ ಬರಹಗಳು ಟ್ವಿಟರ್‌ನಲ್ಲಿ ತುಂಬಿವೆ. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !