ಸೋಮವಾರ, ಏಪ್ರಿಲ್ 6, 2020
19 °C

ಮಹಿಳಾ ಟಿ20 ವಿಶ್ವಕಪ್ | ವೆಸ್ಟ್ ಇಂಡೀಸ್ ಎದುರು ಗೆದ್ದು ಬೀಗಿದ ಪಾಕಿಸ್ತಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಯಾನ್‌ಬೆರಾ: ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ನೀಡಿದ್ದ 125 ರನ್‌ಗಳ ಗುರಿಯನ್ನು ಪಾಕಿಸ್ತಾನ ಕೇವಲ 2 ವಿಕೆಟ್‌ ಕಳೆದುಕೊಂಡು ತಲುಪಿ ಗೆಲುವಿನ ನಗೆ ಬೀರಿತು.

ಇಲ್ಲಿನ ಮಾನುಕಾ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌, ಪಾಕಿಸ್ತಾನದ ಬಿಗುವಿನ ಬೌಲಿಂಗ್‌ ಎದುರು ನಿಗದಿತ 20 ಓವರ್‌ಗಳಲ್ಲಿ ಕೇವಲ 124 ರನ್‌ ಗಳಿಸಿತ್ತು.

ವಿಂಡೀಸ್‌ ಆರಂಭಿಕ ಆಟಗಾರ್ತಿ ಹೇಲೇ ಮ್ಯಾಥ್ಯೂಸ್‌, ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಸ್ಟಿಫಾನಿ ಟೇಲರ್‌ ಪಡೆ ರಕ್ಷಣಾತ್ಮಕ ಆಟದ ಮೊರೆಹೋಯಿತು. ಟೇಲರ್‌ (43) ಮತ್ತು ಶೆಮೈನೆ ಕ್ಯಾಂಪ್‌ಬೆಲ್‌ (43) ಹೊರತುಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.

ಪಾಕಿಸ್ತಾನದ ಡಿಯಾನಾ ಬೇಗ್‌, ಐಮಾನ್‌ ಅನ್ವರ್‌ ಮತ್ತು ನಿದಾ ದರ್‌ ತಲಾ ಎರಡು ವಿಕೆಟ್‌ ಉರುಳಿಸಿದರೆ, ಅಮನ್‌ ಅಮೀನ್‌ ಒಂದು ವಿಕೆಟ್‌ ಪಡೆದು ಮಿಂಚಿದ್ದರು.

ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕ ಆಟಗಾರ್ತಿಯರಾದ ಮುನೀಬಾ ಅಲಿ (25) ಮತ್ತು ಜಾವೆರಿಯಾ ಖಾನ್‌ (35) ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 58ರನ್‌ ಕೂಡಿಸಿತು.

ಇವರಿಬ್ಬರೂ ಔಟಾದ ಬಳಿಕ ಕ್ರೀಸ್‌ಗಿಳಿದ ನಾಯಕಿ ಬಿಸ್ಮತ್‌ ಮರೂಫ್‌ (39) ಮತ್ತು ನಿದಾ ದರ್‌ (18) ಮೂರನೇ ವಿಕೆಟ್‌ಗೆ ಮುರಿಯದ 50 ರನ್‌ ಕೂಡಿಸಿದರು. ಹೀಗಾಗಿ ಪಾಕ್‌ ಇನ್ನೂ 10 ಎಸೆತ ಬಾಕಿ ಇರುವಂತೆಯೇ 127 ರನ್‌ ಗಳಿಸಿತು.

ಪಾಕಿಸ್ತಾನ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ತಮ್ಮ ಮುಂದಿನ ಪಂದ್ಯದಲ್ಲಿ (ಫೆಬ್ರುವರಿ 28ರಂದು) ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು