ಟಿ20 ಕ್ರಿಕೆಟ್‌: ಭಾರತಕ್ಕೆ 159ರನ್‌ ಗುರಿ ನೀಡಿದ ನ್ಯೂಜಿಲೆಂಡ್‌

7
ಸರಣಿ ಸಮಬಲದ ಲೆಕ್ಕಾಚಾರದಲ್ಲಿ ರೋಹಿತ್‌ ಬಳಗ

ಟಿ20 ಕ್ರಿಕೆಟ್‌: ಭಾರತಕ್ಕೆ 159ರನ್‌ ಗುರಿ ನೀಡಿದ ನ್ಯೂಜಿಲೆಂಡ್‌

Published:
Updated:

ಆಕ್ಲೆಂಡ್‌: ಭಾರತ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 158 ರನ್‌ ಕಲೆ ಹಾಕಿದೆ.‌

ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ ಬಳಗಕ್ಕೆ ಭುವನೇಶ್ವರ್‌ ಕುಮಾರ್‌ ಆರಂಭಿಕ ಆಘಾತ ನೀಡಿದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಟಿಮ್‌ ಸೀಫರ್ಟ್‌ ಈ ಪಂದ್ಯದಲ್ಲಿ ಕೇವಲ 12 ರನ್‌ಗಳಿಸಿ ಔಟಾದರು. ಅನುಭವಿ ರಾಸ್‌ ಟೇಲರ್‌(42) ಹಾಗೂ ಕಾಲಿನ್‌ ಡಿ ಗ್ರಾಂಡ್‌ಹೋಮ್‌(50) ಹೊರತುಪಡಿಸಿ ಉಳಿದ ಆಟಗಾರರು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾದರು.

ಭಾರತ ಪರ ಕೃಣಾಲ್‌ ಪಾಂಡ್ಯ ಮೂರು ಹಾಗೂ ಖಲೀಲ್‌ ಅಹ್ಮದ್‌ ಎರಡು ವಿಕೆಟ್‌ ಪಡೆದರು. ಭುವನೇಶ್ವರ್‌, ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಕಬಳಿಸಿದರು.

ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್‌ ಪಡೆ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವನ್ನು 80 ರನ್‌ಗಳಿಂದ ಮಣಿಸಿತ್ತು. ಈ ಪಂದ್ಯವನ್ನೂ ಗೆದ್ದು ಮೂರು ಪಂದ್ಯಗಳ ಸರಣಿಯನ್ನು ಜಯಿಸುವ ಲೆಕ್ಕಾಚಾರದಲ್ಲಿ ಕೇನ್‌ ಬಳಗವಿದ್ದರೆ, ಸಮಬಲ ಸಾಧಿಸುವ ಉದ್ದೇಶ ರೋಹಿತ್‌ ಪಡೆಯದ್ದು.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಭಾರತ 2 ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 10ರನ್‌ ಗಳಿಸಿದೆ. ನಾಯಕ ರೋಹಿತ್‌(6) ಹಾಗೂ ಶಿಖರ್‌ ಧವನ್‌(4) ಕ್ರೀಸ್‌ನಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !