ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ ಎರಡನೇ ಟೆಸ್ಟ್ |  ಶಮಿ, ಬೂಮ್ರಾ ದಾಳಿಗೆ ತತ್ತರಿಸಿದ ಕಿವೀಸ್‌ ಪಡೆ

7 ರನ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ
Last Updated 1 ಮಾರ್ಚ್ 2020, 6:52 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್: ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ ಅವರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌ 73.1 ಓವರ್‌ಗಳಲ್ಲಿ 235 ರನ್‌ ಗಳಿಸಿ ಆಲೌಟ್‌ ಆಗಿದೆ.

ಹೆಗ್ಲೆ ಓವಲ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್‌ ತಂಡ ಆರಂಭಿಕ ಆಘಾತ ಎದುರಿಸಿತು. ಅರ್ಧಶತಕ ಗಳಿಸಿದ್ದ ಟಾಮ್‌ ಲಥಾಮ್‌ ಶಮಿಗೆ ವಿಕೆಟ್‌ ಒಪ್ಪಿಸಿದರು. ಇತ್ತ 30 ರನ್‌ ಗಳಿಸಿದ್ದ ಟಾಮ್ ಬ್ಲಂಡೆಲ್, ಉಮೇಶ್‌ ಯಾದವ್‌ ಅವರ ಎಲ್‌ಬಿ ಬಲೆಗೆ ಬಿದ್ದರು.

ಬಳಿಕ ಕ್ರೀಸ್‌ಗೆ ಬಂದ ನಾಯಕ ಕೇನ್‌ ವಿಲಿಯಮ್ಸನ್‌ ಕೇವಲ 3 ರನ್‌ ಗಳಿಸಿ ಬೂಮ್ರಾಗೆ ಶರಣಾದರು. ಬಳಿಕ ಆಟ ಮುಂದುವರಿಸಿದ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 26, ನೀಲ್‌ ವ್ಯಾಗ್ನರ್‌ 49 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ಭಾರತದ ಪರ ಮೊಹಮ್ಮದ್‌ ಶಮಿ 4, ಜಸ್‌ಪ್ರೀತ್‌ ಬೂಮ್ರಾ 3, ರವೀಂದ್ರ ಜಡೇಜ 2, ಉಮೇಶ್‌ ಯಾದವ್‌ 1 ವಿಕೆಟ್‌ ಪಡೆದು ಮಿಂಚಿದರು.

7 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸಿದ್ದು,ಎರಡನೇ ದಿನದಾಟದ ಅಂತ್ಯಕ್ಕೆ36 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 97ರನ್‌ ಗಳಿಸಿದೆ. (ಹನುಮ ವಿಹಾರಿ ಔಟಾಗದೆ 05, ರಿಷಭ್‌ ಪಂತ್‌ ಔಟಾಗದೆ 01) ಕ್ರೀಸ್‌ನಲ್ಲಿದ್ದಾರೆ.

ಶನಿವಾರ ಟಾಸ್ ಗೆದ್ದ ಆತಿಥೇಯ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ಮೊದಲ ಇನಿಂಗ್ಸ್‌ 63 ಓವರ್‌ಗಳಲ್ಲಿ 242 ರನ್‌ ಗಳಿಸಿ ಆಲೌಟ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT