ವೆಲ್ಲಿಂಗ್ಟನ್: ಏಕದಿನ ಮಾದರಿಯಲ್ಲಿ ಮೊದಲ ಬಾರಿ ಶತಕಗಳನ್ನು ಗಳಿಸಿದ ಡೆವೊನ್ ಕಾನ್ವೆ ಹಾಗೂ ಆಲ್‌ರೌಂಡರ್ ಡೆರಿಲ್ ಮಿಚೆಲ್ ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಅವರ ಆಟದ ನೆರವಿನಿಂದ ಆತಿಥೇಯ ಪಡೆ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 164 ರನ್‌ಗಳ ಗೆಲುವು ಸಾಧಿಸಿತು.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 3–0ಯಿಂದ ಕ್ಲೀನ್‌ಸ್ವೀಪ್ ಮಾಡಿತು.

ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾ ಸಂಜಾತ ಕಾನ್ವೆ (126 ರನ್, 110 ಎಸೆತ, 17 ಬೌಂಡರಿ) ಹಾಗೂ ಡೆರಿಲ್ (ಔಟಾಗದೆ 100, 92 ಎ, 9 ಬೌಂ, 2 ಸಿ.) ಐದನೇ ವಿಕೆಟ್ ಜೊತೆಯಾಟದಲ್ಲಿ 159 ರನ್ ಸೇರಿಸಿದರು. ಇದರಿಂದಾಗಿ ತಂಡವು ನಿಗದಿತ ಓವರ್‌ಗಳಲ್ಲಿ 318 ರನ್ ಪೇರಿಸಿತು.

ಇದನ್ನೂ ಓದಿ:IND vs ENG: ರಾಹುಲ್ ಸೆಂಚುರಿ, ಪಂತ್-ಕೊಹ್ಲಿ ಫಿಫ್ಟಿ; ಭಾರತ 336/6

ಗುರಿ ಬೆನ್ನತ್ತಿದ ಬಾಂಗ್ಲಾ ಮ್ಯಾಟ್ ಹೆನ್ರಿ (27ಕ್ಕೆ 4) ಹಾಗೂ ಜೇಮ್ಸ್ ನೀಶಮ್ (27ಕ್ಕೆ 5) ಬೌಲಿಂಗ್ ದಾಳಿಗೆ ಕಂಗೆಟ್ಟಿತು. ಮೊಹಮದುಲ್ಲಾ ( ಔಟಾಗದೆ 76) ತೋರಿದ ಏಕಾಂಗಿ ಹೋರಾಟ ಫಲ ಕೊಡಲಿಲ್ಲ. ಪ್ರವಾಸಿ ತಂಡವು 154 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಒಪ್ಪಿಸಿತು.

ಸಂಕ್ಷಿಪ್ತ ಸ್ಕೋರು:

ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 318 (ಡೆವೊನ್ ಕಾನ್ವೆ 126, ಡೆರಿಲ್ ಮಿಚೆಲ್ ಔಟಾಗದೆ 100, ಮಾರ್ಟಿನ್ ಗಪ್ಟಿಲ್ 26, ಹೆನ್ರಿ ನಿಕೊಲ್ಸ್ 18; ರುಬೆಲ್ ಹುಸೇನ್ 70ಕ್ಕೆ 3, ಸೌಮ್ಯ ಸರ್ಕಾರ್ 37ಕ್ಕೆ 1, ಟಸ್ಕಿನ್ ಅಹಮದ್ 52ಕ್ಕೆ 1).

ಬಾಂಗ್ಲಾದೇಶ: 42.4 ಓವರ್‌ಗಳಲ್ಲಿ 154 (ಮೊಹಮ್ಮದುಲ್ಲಾ ಔಟಾಗದೆ 76, ಲಿಟನ್ ದಾಸ್ 21, ಮುಷ್ಕಿಕುರ್ ರಹೀಂ 21; ಮ್ಯಾಟ್ ಹೆನ್ರಿ 27ಕ್ಕೆ 4, ಜೇಮ್ಸ್ ನೀಶಮ್ 27ಕ್ಕೆ 5, ಕೈಲ್ ಜೇಮಿಸನ್ 30ಕ್ಕೆ 1).

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 164 ರನ್‌ಗಳ ಜಯ, ಮೂರು ಪಂದ್ಯಗಳ ಸರಣಿಯಲ್ಲಿ 3–0 ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.