ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕರ ಸಹಮತವಿದೆ; ಮುಂದುವರಿಯಲು ಮನಸ್ಸಿಲ್ಲ: ಐಸಿಸಿ ಮುಖ್ಯಸ್ಥ ಶಶಾಂಕ್

Last Updated 10 ಡಿಸೆಂಬರ್ 2019, 12:56 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಅವಧಿಗೂ ನಾನೇ ಮುಖ್ಯಸ್ಥನಾಗಿ ಮುಂದುವರಿಯುವುವಂತೆ ಮಂಡಳಿಯ ನಿರ್ದೇಶಕರು ಸಹಮತ ಸೂಚಿಸಿದ್ದರು. ಆದರೆ, ಮುಂದುವರಿಯಲು ನಾನು ತಯಾರಿಲ್ಲ ಎಂದುಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಅಧ್ಯಕ್ಷ ಶಶಾಂಕ್‌ ಮನೋಹರ್‌ ಹೇಳಿಕೊಂಡಿದ್ದಾರೆ.

‘ಮುಂದಿನ ಎರಡು ವರ್ಷಗಳ ಅವಧಿಗೆಮುಂದುವರಿಯುವ ಆಸಕ್ತಿ ನನಗಿಲ್ಲ. ಇನ್ನೊಂದು ಅವಧಿಗೆ ಮುಂದುವರಿಯುವಂತೆಮಂಡಳಿಯ ಹೆಚ್ಚಿನ ನಿರ್ದೇಶಕರುಗಳು ನನಗೆ ಮನವಿ ಮಾಡಿದ್ದರು. ಆದರೆ, ಮುಂದುವರಿಯುವುದಿಲ್ಲ ಎಂದು ಹೇಳಿದ್ದೇನೆ’ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

‘ನಾನು ಬಹುತೇಕ ಐದು ವರ್ಷಗಳಿಂದ ಐಸಿಸಿ ಮುಖ್ಯಸ್ಥನಾಗಿದ್ದೇನೆ. 2020ರ ಬಳಿಕ ನಾನು ಮುಂದುವರಿಯಲು ಬಯಸುವುದಿಲ್ಲ. ಆ ಬಗ್ಗೆ ಸ್ಪರ್ಷ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಬಳಿಕ ಯಾರು ಮುಖ್ಯಸ್ಥರಾಗಲಿದ್ದಾರೆ ಎಂಬುದುಮೇ ತಿಂಗಳಲ್ಲಿ ಗೊತ್ತಾಗಲಿದೆ’ ಎಂದು ತಿಳಿಸಿದ್ದಾರೆ.

ಮನೋಹರ್‌ ಐಸಿಸಿಯ ಮೊದಲ ಸ್ವತಂತ್ರ ಅಧ್ಯಕ್ಷರಾಗಿ 2016ರಲ್ಲಿ ಆಯ್ಕೆಯಾಗಿದ್ದರು. 2018ರಲ್ಲಿ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮನೋಹರ್‌ ಕೈಗೊಂಡ ಕೆಲವು ನಿರ್ಧಾರಗಳಿಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರತಿ ವರ್ಷಟಿ20 ವಿಶ್ವಕಪ್‌ ಮತ್ತು ಪ್ರತಿ ಮೂರು ವರ್ಷಗಳಿಗೊಮ್ಮೆಏಕದಿನ ವಿಶ್ವಕಪ್‌ ಆಯೋಜಿಸಲು ಪ್ರಸ್ತಾಪ ಮಾಡಲಾಗಿತ್ತು. ಇದನ್ನು ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಒಪ್ಪಿದ್ದರೂ, ಬಿಸಿಸಿಐ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT