ಬುಧವಾರ, ಡಿಸೆಂಬರ್ 2, 2020
20 °C

ಕೊನೆಯ ಎಸೆತದಲ್ಲಿ ಕೆವಿನ್‌ ಸಿಕ್ಸರ್‌: ಸೂಪರ್‌ ಓವರ್‌ನಲ್ಲಿ ಐರ್ಲೆಂಡ್‌ ಜಯಭೇರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಗ್ರೇಟರ್‌ ನೋಯ್ಡಾ: ಸೂಪರ್‌ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆತ್ತಿದ ಕೆವಿನ್‌ ಒ’ಬ್ರಿಯಾನ್‌, ಐರ್ಲೆಂಡ್‌ ತಂಡಕ್ಕೆ ಮೂರನೇ ಟಿ–20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಂಗಳವಾರ ಅಫ್ಗಾನಿಸ್ತಾನ ವಿರುದ್ಧ ರೋಚಕ ಜಯ ತಂದಿತ್ತರು.

ಐರ್ಲೆಂಡ್‌ ಪಾಲಿಗೆ ಇದು ಸಮಾಧಾನಕರ ಗೆಲುವು. ಅಫ್ಗಾನಿಸ್ತಾನ 2–1 ರಿಂದ ಸರಣಿ ತನ್ನದಾಗಿಸಿಕೊಂಡಿತು. ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಐರ್ಲೆಂಡ್‌ ನಿಗದಿತ ಓವರುಗಳಲ್ಲಿ 8 ವಿಕೆಟ್‌ಗೆ 142 ರನ್‌ ಹೊಡೆಯಿತು. ಅಫ್ಗಾನಿಸ್ತಾನ ತಂಡ ಏಳು ವಿಕೆಟ್‌ ಕಳೆದುಕೊಂಡು ಇಷ್ಟೇ ಮೊತ್ತ ದಾಖಲಿಸಿತು.

ಸೂಪರ್‌ ಓವರ್‌ನಲ್ಲಿ ಬಿಗಿ ದಾಳಿ ನಡೆಸಿದ ಕ್ರೇಗ್‌ ಯಂಗ್‌, ಎದುರಾಳಿ ಬ್ಯಾಟ್ಸಮನ್ನರಾದ ನಬಿ– ಗುರ್ಬಾಜ್‌ ಜೋಡಿಗೆ ಎಂಟು ರನ್‌ ಅಷ್ಟೇ ಕೊಟ್ಟರು. ಉತ್ತರವಾಗಿ  ಅನುಭವಿ ರಶೀದ್‌ ಖಾನ್‌ ಮಾಡಿದ ಓವರ್‌ನ ಕೊನೆಯ ಎಸೆತದಲ್ಲಿ ಐರ್ಲೆಂಡ್‌ಗೆ ಗೆಲುವಿಗೆ ಮೂರು ರನ್‌ ಬೇಕಿತ್ತು. ಹಳೆ ಹುಲಿ ಒ’ಬ್ರಿಯಾನ್‌ ಚೆಂಡನ್ನು ಲಾಂಗ್‌ಆಫ್‌ ಬೌಂಡರಿ ಆಚೆ ಅಟ್ಟಿದರು.

ಸ್ಕೋರುಗಳು: ಐರ್ಲೆಂಡ್‌: 20 ಓವರುಗಳಲ್ಲಿ 8 ವಿಕೆಟ್‌ಗೆ 142 (ಕೆವಿನ್ ಒ’ಬ್ರಿಯಾನ್ 26, ಗರೆತ್‌ ಡೆಲಾನಿ 37; ನವೀನ್‌–ಉಲ್‌–ಹಕ್‌ 21ಕ್ಕೆ3, ಖೈಸ್‌ ಅಹ್ಮದ್‌ 25ಕ್ಕೆ3); ಅಫ್ಗಾನಿಸ್ತಾನ: 20 ಓವರುಗಳಲ್ಲಿ 7 ವಿಕೆಟ್‌ಗೆ 142 (ರಹಮಾನುಲ್ಲಾ ಗುರ್ಬಾಜ್‌ 42, ಅಸ್ಗರ್‌ ಅಫ್ಗಾನ್‌ 32; ಡೆಲಾನಿ 21ಕ್ಕೆ2, ಸಿಮಿ ಸಿಂಗ್‌ 37ಕ್ಕೆ2)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು