ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಎದುರಿನ ಟೆಸ್ಟ್‌: ಫಾಲೊ ಆನ್‌ನಿಂದ ತಪ್ಪಿಸಿಕೊಂಡ ಪಾಕಿಸ್ತಾನ

Last Updated 28 ಡಿಸೆಂಬರ್ 2020, 15:14 IST
ಅಕ್ಷರ ಗಾತ್ರ

ಮೌಂಟ್ ಮಾಂಗನೂಯಿ: ಟೆಸ್ಟ್ ತಂಡದ ಹೊಸ ನಾಯಕ ಮೊಹಮ್ಮದ್ ರಿಜ್ವಾನ್ ಒತ್ತಡ ಮೀರಿ ನಿಲ್ಲುವಲ್ಲಿ ಯಶಸ್ವಿಯಾದರು. ಫಹೀಂ ಆಶ್ರಫ್ ಜೊತೆ ಅವರು ತೋರಿದ ಶತಕದ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ಆತಿಥೇಯ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಫಾಲೊಆನ್‌ನಿಂದ ತಪ್ಪಿಸಿಕೊಂಡಿತು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನ 200 ರನ್‌ಗಳ ಗಡಿ ದಾಟುವುದೇ ಸಂದೇಹವಾಗಿತ್ತು. ಆದರೆ ರಿಜ್ವಾನ್ ಮತ್ತು ಫಹೀಮ್ ಅಮೋಘ ಆಟವಾಡಿದರು. ಮೂರನೇ ದಿನದಾಟದ ಕೊನೆಯ ಓವರ್‌ನಲ್ಲಿ ತಂಡದ ಕೊನೆಯ ವಿಕೆಟ್ ಉರುಳಿತು. ಅಷ್ಟರಲ್ಲಿ ತಂಡ 239 ರನ್ ಕಲೆ ಹಾಕಿತ್ತು.

32 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ತಂಡ 52ಕ್ಕೆ5 ಎಂಬ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ರಿಜ್ವಾನ್ ಕ್ರೀಸ್‌ಗೆ ಬಂದಿದ್ದರು. ನಂತರ ಅವರಿಗೆ ಫಹೀಂ ಜೊತೆಯಾದರು. 30 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿದ ಇವರಿಬ್ಬರು ಏಳನೇ ವಿಕೆಟ್‌ಗೆ 106 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ನ್ಯೂಜಿಲೆಂಡ್‌: 155 ಓವರ್‌ಗಳಲ್ಲಿ 431; ಪಾಕಿಸ್ತಾನ: 102.2 ಓವರ್‌ಗಳಲ್ಲಿ 239 (ಅಬಿದ್ ಅಲಿ 25, ಮೊಹಮ್ಮದ್ ರಿಜ್ವಾನ್ 71, ಫಹೀಂ ಅಶ್ರಫ್ 91; ಟಿಮ್ ಸೌಥಿ 69ಕ್ಕೆ2, ಟ್ರೆಂಟ್ ಬೌಲ್ಟ್ 71ಕ್ಕೆ2, ಕೈಲ್ ಜೆಮೀಸನ್ 35ಕ್ಕೆ3, ನೀಲ್‌ ವ್ಯಾಗ್ನರ್ 50ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT