ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ಸತತ 4ನೇ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಪಾಕಿಸ್ತಾನ

Last Updated 2 ನವೆಂಬರ್ 2021, 18:06 IST
ಅಕ್ಷರ ಗಾತ್ರ

ಅಬುಧಾಬಿ: ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಮೀಬಿಯಾ ವಿರುದ್ಧ ಗೆಲುವು ಸಾಧಿಸಿತು. ಇದರೊಂದಿಗೆ ಆಡಿದ ಸತತ ನಾಲ್ಕನೇ ಪಂದ್ಯವನ್ನೂ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಪಾಕಿಸ್ತಾನ ನೀಡಿದ190ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನಮೀಬಿಯಾ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡು144 ರನ್‌ ಗಳಿಸಿ45ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು.

ಕ್ರೇಗ್‌ ವಿಲಿಯಮ್ಸ್‌ (40), ಡೇವಿಡ್‌ ವೀಸ್‌ (ಅಜೇಯ 43) ಮತ್ತು ಸ್ಟೇಫನ್‌ ಬ್ರಾಡ್‌ (29) ಪಾಕ್‌ ಬೌಲರ್‌ಗಳೆದುರು ದಿಟ್ಟ ಆಟವಾಡಿದರು. ಪಾಕ್‌ ಪರ ಹಸನ್‌ ಅಲಿ, ಇಮದ್‌ ವಾಸಿಂ, ಹ್ಯಾರಿಸ್‌ ರೌಫ್‌ ಮತ್ತು ಶಾಬದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು.

ಇದಕ್ಕೂ ಮೊದಲುಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನಕ್ಕೆ ನಾಯಕ ಬಾಬರ್‌ ಅಜಂ ಮತ್ತು ಮೊಹಮ್ಮದ್‌ ರಿಜ್ವಾನ್‌ ಉತ್ತಮ ಆರಂಭ ಒದಗಿಸಿದರು. ಆರಂಭದಲ್ಲಿ ರಕ್ಷಣಾತ್ಮಕವಾಗಿ ಬ್ಯಾಟ್‌ ಬೀಸಿದ ಈ ಜೋಡಿ ನಿಧಾನವಾಗಿರನ್‌ ಗಳಿಕೆಯ ವೇಗ ಹೆಚ್ಚಿಸಿದರು.

ಈ ಇಬ್ಬರುಮೊದಲ ವಿಕೆಟ್‌ಗೆ ಕೇವಲ14.2 ಓವರ್‌ಗಳಲ್ಲಿ113 ರನ್‌ ಗಳಿಸಿದರು. ಬಾಬರ್‌49 ಎಸೆತಗಳಲ್ಲಿ7 ಬೌಂಡರಿ ನೆರವಿನಿಂದ70 ರನ್‌ ಗಳಿಸಿ ಔಟಾದರು. ಬಳಿಕ ಬಂದ ಫಖರ್ ಜಮಾನ್‌ (5) ಹೆಚ್ಚು ಹೊತ್ತು ನಿಲ್ಲಲಿಲ್ಲ.

20ನೇ ಓವರ್‌ನಲ್ಲಿ24 ರನ್ ಸಿಡಿಸಿದರಿಜ್ವಾನ್‌
ಈ ಹಂತದಲ್ಲಿಮೂರನೇ ವಿಕೆಟ್‌ಗೆ ರಿಜ್ವಾನ್‌ಗೆ ಜೊತೆಯಾದ ಅನುಭವಿ ಆಟಗಾರ ಮೊಹಮದ್‌ ಹಫೀಜ್‌ ಬಿರುಸಾಗಿ ಬ್ಯಾಟ್‌ ಬೀಸಿದರು. ‌ಕೇವಲ16 ಎಸೆತಗಳನ್ನು ಎದುರಿಸಿದ ಹಫೀಜ್‌5 ಬೌಂಡರಿ ಸಹಿತ32 ರನ್‌ ಗಳಿಸಿದರು.

ಇನ್ನೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ರಿಜ್ವಾನ್‌, ಕೊನೇ ಓವರ್‌ನಲ್ಲಿ ಅಕ್ಷರಶಃ ಅಬ್ಬರಿಸಿದರು. ಜೆಜೆ ಸ್ಮಿತ್‌ ಎಸೆದ20ನೇ ಓವರ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ ಬರೋಬ್ಬರಿ24 ರನ್‌ ಸಿಡಿಸಿದರು. ಈ ಓವರ್‌ಗೂ ಮುನ್ನ ರಿಜ್ವಾನ್44 ಎಸೆತಗಳಲ್ಲಿ55 ರನ್‌ ಗಳಿಸಿದ್ದರು. ಅಂತಿಮವಾಗಿ ಅವರ ಬ್ಯಾಟ್‌ನಿಂದ 50 ಎಸೆತಗಳಲ್ಲಿ79 ರನ್‌ ಬಂದಿತು.

ಹೀಗಾಗಿ ತಂಡದ ಮೊತ್ತ189ಕ್ಕೆ ಏರಿತು.

ಪಾಕಿಸ್ತಾನ ಮತ್ತು ನಮೀಬಿಯಾ ತಮ್ಮ ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ಸ್ಕಾಟ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT