ಭಾನುವಾರ, ಸೆಪ್ಟೆಂಬರ್ 26, 2021
21 °C

ಕ್ರಿಕೆಟ್‌ನಿಂದ ದೂರ ಇರುವುದೆಂದರೆ ಚಿತ್ರಹಿಂಸೆ: ಪೃಥ್ವಿ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರಿಕೆಟ್‌ನಿಂದ ಬಹಳ ದಿನಗಳವರೆಗೆ ದೂರ ಇರುವುದೆಂದರೆ ಕಠಿಣ ಶಿಕ್ಷೆಯನ್ನು ಅನುಭವಿಸಿದಂತೆ ಎಂದು ಭಾರತ ತಂಡದ ಆಟಗಾರ ಪೃಥ್ವಿ ಶಾ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನ ಪೃಥ್ವಿ ಉದ್ದೀಪನ ಮದ್ದು ಸೇವನೆಯಿಂದಾಗಿ ಹೋದ ವರ್ಷದ ಜುಲೈ ನಿಂದ ನವೆಂಬರ್‌ನವರೆಗೆ ಅಮಾನತುಗೊಂಡಿದ್ದರು.  ಅವರು ಕೆಮ್ಮಿನ ಚಿಕಿತ್ಸೆಗಾಗಿ ಸೇವಿಸಿದ್ದ ಔಷಧಿಯಲ್ಲಿ ನಿಷೇಧಿತ ಮದ್ದಿನ ಅಂಶ ಇರುವುದು ದೃಢಪಟ್ಟಿತ್ತು.

ಆ ಘಟನೆಯ ಕುರಿತು ಡೆಲ್ಲಿ ಡೇರ್‌ಡೆವಿಲ್ಸ್‌ ವೆಬ್‌ಸೈಟ್‌ಗೆ ಮಾತನಾಡಿರುವ ಪೃಥ್ವಿ, ‘ಅದು ತಪ್ಪಾಗಿತ್ತು. ಅದಕ್ಕಾಗಿ ಬಹಳಷ್ಟು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದು ಮಾತ್ರ ಚಿತ್ರಹಿಂಸೆಯಾಗಿತ್ತು. ಆಗ ಮನದಲ್ಲಿ ಹಲವಾರು ಪ್ರಶ್ನೆಗಳು, ಸಂಶಯಗಳು ಹರಿದಾಡುತ್ತಿದ್ದವು. ಆದರೂ ನನ್ನ ಮೇಲೆ ನಾನು ನಂಬಿಕೆ ಇಟ್ಟುಕೊಂಡಿದ್ದೆ. ಫಿಟ್‌ನೆಸ್‌ಗಾಗಿ ಹೆಚ್ಚು ಸಮಯ ಇಡುತ್ತಿದ್ದೆ’ ಎಂದು ಪೃಥ್ವಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು