ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ವರ್ಷದೊಳಗಿನವರ ವಿಶ್ವಕಪ್‌: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರು, ಪ್ರಿಯಮ್ ನಾಯಕ

Last Updated 2 ಡಿಸೆಂಬರ್ 2019, 8:55 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ19 ವರ್ಷದೊಳಗಿನವರ ವಿಶ್ವಕಪ್‌ ಪಂದ್ಯಾವಳಿಗೆ 15 ಆಟಗಾರರಿರುವ ಭಾರತ ತಂಡ ಪ್ರಕಟಿಸಲಾಗಿದ್ದು, ಉತ್ತರ ಪ್ರದೇಶದವರಾದಪ್ರಿಯಮ್ ಗರ್ಗ್ ಹಾಗೂ ಧ್ರುವ್‌ ಚಾಂದ್‌ ಜುರೆಲ್‌ ಅವರನ್ನು ಕ್ರಮವಾಗಿ ನಾಯಕ ಮತ್ತು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

19 ವರ್ಷದೊಳಗಿನವರ ವಿಶ್ವಕಪ್‌ನ 13ನೇ ಆವೃತ್ತಿ ಇದಾಗಿದ್ದು,ನಾಲ್ಕು ಗುಂಪುಗಳಲ್ಲಿ16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಎಂಟರ ಘಟಕ್ಕೆ ಲಗ್ಗೆ ಇಡಲಿವೆ.2020ರಜನವರಿ 17ರಿಂದ ಫೆಬ್ರವರಿ 9ರ ವರೆಗೆ ಪಂದ್ಯಾವಳಿ ನಡೆಯಲಿದೆ. ಈ ಸಂಬಂಧಅಖಿಲ ಭಾರತ ಕಿರಿಯರ ಆಯ್ಕೆ ಸಮಿತಿಯು ಸೋಮವಾರ ಪಟ್ಟಿ ಬಿಡುಗಡೆ ಮಾಡಿದೆ.ತಂಡದಲ್ಲಿರುವ ಶುಭಾಂಗ್‌ ಹೆಗ್ಡೆ ಮತ್ತುವಿದ್ಯಾಧರ್‌ ಪಾಟೀಲ್‌ ಕನ್ನಡಿಗರು.

ಹಾಲಿ ಚಾಂಪಿಯನ್‌ ಭಾರತ, ನ್ಯೂಜಿಲೆಂಡ್‌, ಶ್ರೀಲಂಕಾ ಹಾಗೂ ಜಪಾನ್‌ ತಂಡಗಳು ಎ ಗುಂಪಿನಲ್ಲಿವೆ. ಭಾರತವು ಶ್ರೀಲಂಕಾ, ಜಪಾನ್‌ ಹಾಗೂ ನ್ಯೂಜಿಲೆಂಡ್‌ ತಂಡಗಳ ವಿರುದ್ಧ ಕ್ರಮವಾಗಿ ಜನವರಿ 17, 21 ಮತ್ತು 24ರಂದು ಕಣಕ್ಕಿಳಿಯಲಿದೆ.

ಭಾರತಇದುವರೆಗೆ ಒಟ್ಟು 4 ಬಾರಿ ಚಾಂಪಿಯನ್‌ ಆಗಿದೆ. ಆಸ್ಟ್ರೇಲಿಯಾ 3, ಪಾಕಿಸ್ತಾನ 2 ಸಲ ಪ್ರಶಸ್ತಿ ಗೆದ್ದಿದ್ದರೆ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ತಲಾ ಒಮ್ಮೊಮ್ಮೆ ಕಪ್‌ ಎತ್ತಿ ಹಿಡಿದಿವೆ.

ತಂಡ ಹೀಗಿದೆ
ಪ್ರಿಯಮ್‌ ಗರ್ಗ್‌ (ನಾಯಕ), ಧ್ರುವ್‌ ಚಾಂದ್‌ ಜುರೆಲ್‌ (ಉಪನಾಯಕ ಮತ್ತು ವಿಕೆಟ್‌ ಕೀಪರ್‌), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮಾ, ದಿವ್ಯಾಂಶ್‌ ಸಕ್ಸೇನಾ, ಶಾಶ್ವತ್‌ ರಾವತ್‌, ದಿವ್ಯಾಂಶ್‌ ಜೋಶಿ, ಶುಭಾಂಗ್‌ ಹೆಗ್ಡೆ, ರವಿ ಬಿಶ್ಣೋಯ್‌, ಆಕಾಶ್‌ ಸಿಂಗ್‌, ಕಾರ್ತಿಕ್‌ ತ್ಯಾಗಿ, ಅಥರ್ವ ಅಂಕೋಲೆಕರ್‌, ಕುಮಾರ್‌ ಕುಶಾಗ್ರ (ವಿಕೆಟ್‌ ಕೀಪರ್‌), ಸುಶಾಂತ್‌ ಮಿಶ್ರಾ, ವಿದ್ಯಾಧರ್‌ ಪಾಟೀಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT