ಮಂಗಳವಾರ, ಅಕ್ಟೋಬರ್ 27, 2020
28 °C

IPL | ಸತತ 20 ಇನಿಂಗ್ಸ್‌ಗಳಲ್ಲಿ ವಿಕೆಟ್; ವಿನಯ್‌ಕುಮಾರ್ ದಾಖಲೆ ಮುರಿದ ರಬಾಡ

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ಕಗಿಸೊ ರಬಾಡ ಅವರು ಐಪಿಎಲ್‌ನಲ್ಲಿ ಸತತ 20 ಇನಿಂಗ್ಸ್‌ಗಳಲ್ಲಿ ವಿಕೆಟ್‌ ಪಡೆದ ಸಾಧನೆ ಮಾಡಿದರು. ಆ ಮೂಲಕ ಆರ್.ವಿನಯ್‌ ಕುಮಾರ್‌ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ಐಪಿಎಲ್‌ನಲ್ಲಿ ಸತತವಾಗಿ ಅತಿಹೆಚ್ಚು ಪಂದ್ಯಗಳಲ್ಲಿ ಕನಿಷ್ಠ 1 ವಿಕೆಟ್‌ ಪಡೆದ ಬೌಲರ್‌ಗಳು

ಆಟಗಾರಪಂದ್ಯಗಳುಅವಧಿ
ಕಗಿಸೊ ರಬಾಡ20*2019ರಿಂದ ಈವರೆಗೆ
ಆರ್‌ ವಿನಯ್‌ ಕುಮಾರ್192012-13
ಲಸಿತ್‌ ಮಾಲಿಂಗ172015-2017
ಯಜುವೇಂದ್ರ ಚಾಹಲ್‌152016-2017

ವಿನಯ್‌ ಕುಮಾರ್ ಅವರು 2012–13ರ ಅವಧಿಯಲ್ಲಿ ಸತತವಾಗಿ 19 ಪಂದ್ಯಗಳಲ್ಲಿ ವಿಕೆಟ್‌ ಪಡೆದಿದ್ದರು. ಇದು ಈ ವರೆಗಿನ ಉತ್ತಮ ದಾಖಲೆಯಾಗಿತ್ತು.

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ 6 ಪಂದ್ಯ ಆಡಿರುವ ರಬಾಡ ಒಟ್ಟು 15 ವಿಕೆಟ್‌ಗಳನ್ನು ಪಡೆದುಕೊಂಡಿದ್ದು, ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್‌ ವೇಗಿ ಜಸ್‌ಪ್ರೀತ್‌ ಬೂಮ್ರಾ (11 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ.

   ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

   ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

   ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

   ಈ ವಿಭಾಗದಿಂದ ಇನ್ನಷ್ಟು