ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ರೈಸರ್ಸ್‌ ಹೈದರಾಬಾದ್‌ನಲ್ಲಿ ಜನಾಂಗೀಯ ನಿಂದನೆ: ಡರೆನ್ ಸಾಮಿ ಬಹಿರಂಗ

ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹೇಳಿಕೆ ನೀಡಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗ
Last Updated 9 ಜೂನ್ 2020, 14:36 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಜನಾಂಗೀಯ ನಿಂದನೆ ನಡೆಯುತ್ತದೆ. ಅದಕ್ಕೆ ತಾವೇ ಸಾಕ್ಷಿ ಎಂದು ವೆಸ್ಟ್‌ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಡರೆನ್ ಸಾಮಿ ಆರೋಪ ಮಾಡಿದ್ದಾರೆ.

ಮಂಗಳವಾರ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ವಿಡಿಯೋದಲ್ಲಿ ಡರೆನ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯದಲ್ಲಿ ಆಫ್ರಿಕಾ ಮೂಲದ ಜಾರ್ಜ್ ಫ್ಲಾಯ್ಡ್‌ ಸಾವಿಗೀಡಾದ ನಂತರ ಕ್ರೀಡಾ ಕ್ಷೇತ್ರದಲ್ಲಿ ಜನಾಂಗೀಯ ನಿಂದನೆಯ ಪ್ರಕರಣಗಳ ಬಗ್ಗೆ ಆಟಗಾರರು ದನಿಯೆತ್ತುತ್ತಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಆಡುವಾಗ ತಮ್ಮನ್ನು ‘ಕಾಲೂ’ಎಂದು ಹಲವರು ಕರೆಯುತ್ತಿದ್ದರು.ಇದು ಮೈಬಣ್ಣವನ್ನು ವ್ಯಂಗ್ಯ ಮಾಡುವ ಪದ ಎಂದು ನಂತರ ಗೊತ್ತಾಗಿತ್ತೆಂದು ಸಾಮಿ ಹೋದ ವಾರ ಹೇಳಿಕೆ ನೀಡಿದ್ದರು. ಇದೀಗ ಮತ್ತೆ ತಾವು 2014ರಲ್ಲಿ ಆಡಿದ್ದ ಸನ್‌ರೈಸರ್ಸ್‌ ಹೈದರಾಬಾದ್ತಂಡದಲ್ಲಿ ನಡೆದ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ.

‘ಆ ಪದದ ಅರ್ಥವು ಇತ್ತೀಚೆಗೆ ನನಗೆ ಗೊತ್ತಾಗಿದೆ. ಸನ್‌ರೈಸರ್ಸ್‌ ತಂಡದಲ್ಲಿದ್ದಾಗಲೂ ಆ ಪದದಿಂದಲೇ ನನ್ನನ್ನು ಕರೆಯುತ್ತಿದ್ದರು. ಆಗ ಎಲ್ಲರೂ ನಗುತ್ತಿದ್ದರು. ಆದರೆ, ಅದೆನೋ ತಮಾಷೆ ಇರಬೇಕು ಅದಕ್ಕೆ ನಗುತ್ತಿದ್ದಾರೆಂದು ತಿಳಿದುಕೊಂಡಿದ್ದೆ. ಆದರೆ ಅದು ನನ್ನ ಜನಾಂಗ, ಮೈಬಣ್ಣದ ಅವಹೇಳನಕಾರಿ ಪದವಾಗಿತ್ತು. ನಾನು ಒಬ್ಬೊಬ್ಬರ ಹೆಸರು ಹೇಳುವ ಮುನ್ನ ನೀವೇ ಹೇಳಿಕೊಂಡು ಬಿಡಿ. ಏಕೆಂದರೆ ನನ್ನನ್ನು ಆ ರೀತಿ ಕರೆದವರು ಯಾರೆಂದು ನಿಮಗೇ ಚೆನ್ನಾಗಿ ಗೊತ್ತಿದೆ’ ಎಂದು ಸಾಮಿ ಎಚ್ಚರಿಕೆ ನೀಡಿದ್ದಾರೆ.

‘ವಿಶ್ವದಾದ್ಯಂತ ಎಲ್ಲ ಕಡೆಯೂ ನಾನು ಆಡಿದ್ದೇನೆ. ಡ್ರೆಸ್ಸಿಂಗ್‌ ರೂಮ್‌ಗಳಲ್ಲಿ ಬೇರೆ ಬೇರೆ ದೇಶಗಳ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಇತ್ತು. ನನ್ನ ಆಟ ಮತ್ತು ವ್ಯಕ್ತಿತ್ವವನ್ನು ಬಹಳಷ್ಟು ಜನರು ಮೆಚ್ಚಿದ್ದಾರೆ, ಪ್ರೀತಿಸಿದ್ದಾರೆ. ಆದರೆ, ಹಸನ್ ಮಿನಾಜ್ (ವೆಬ್ ಷೋ ನಿರೂಪಕ) ಮಾತನಾಡುವ ಸಂದರ್ಭದಲ್ಲಿ ಆ ಪದವು ಗಮನ ಸೆಳೆಯಿತು. ಸನ್‌ರೈಸರ್ಸ್ ತಂಡದಲ್ಲಿ ಕೆಲವರು ನನ್ನನ್ನು ಅದೇ ರೀತ ಕರೆಯುತ್ತಿದ್ದರು’ ಎಂದಿದ್ದಾರೆ.

2016ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಡರೆನ್ ಸಾಮಿ ನಾಯಕರಾಗಿದ್ದರು. ಅಮೆರಿಕದ ಘಟನೆಯ ನಂತರ ಕ್ರಿಸ್ ಗೇಲ್ ಕೂಡ ‘ಕ್ರಿಕೆಟ್‌ನಲ್ಲಿಯೂ ಜನಾಂಗೀಯ ನಿಂದನೆ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT