ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SL Vs BAN Test: ಲಂಕಾ ಗೆಲುವಿನಲ್ಲಿ ಮಿಂಚಿದ ರೆಜಿತಾ

Published 25 ಮಾರ್ಚ್ 2024, 14:00 IST
Last Updated 25 ಮಾರ್ಚ್ 2024, 14:00 IST
ಅಕ್ಷರ ಗಾತ್ರ

ಸಿಲ್ಹೆಟ್‌: ಕಸುನ್ ರೆಜಿತಾ (56ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 328 ರನ್‌ಗಳ ಜಯ ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ 92 ರನ್‌ಗಳ ಮುನ್ನಡೆ ಪಡೆದಿದ್ದ ಲಂಕಾ ಪಡೆಯು, ಎರಡನೇ ಇನಿಂಗ್ಸ್‌ನಲ್ಲಿ 418 ರನ್‌ ಕಲೆಹಾಕಿ ಆತಿಥೇಯ ತಂಡದ ಗೆಲುವಿಗೆ 511 ರನ್‌ಗಳ ಗುರಿಯನ್ನು ನೀಡಿತ್ತು. ಕಠಿಣ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ ತಂಡವು ನಾಲ್ಕನೇ ದಿನವಾದ ಸೋಮವಾರ 49.2 ಓವರ್‌ಗಳಲ್ಲಿ 182 ರನ್‌ಗೆ ಕುಸಿಯಿತು.

ಮೊದಲ ಇನಿಂಗ್ಸ್‌ನಲ್ಲಿ 56ಕ್ಕೆ ಮೂರು ವಿಕೆಟ್‌ ಪಡೆದಿದ್ದ ರಜಿತಾ, ಒಟ್ಟಾರೆ 112 ರನ್‌ಗೆ ಎಂಟು ವಿಕೆಟ್‌ ಪಡೆದು ಜೀವನ ಶ್ರೇಷ್ಠ ಸಾಧನೆ ಮೆರೆದರು.

ಮೂರನೇ ದಿನದಾಟಕ್ಕೆ 47 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಬಾಂಗ್ಲಾ ತಂಡದ ಪರ ಮೊಮಿನುಲ್ ಹಕ್ (87; 148ಎ, 4x12, 6x1) ಹೋರಾಟ ತೋರಿದರು. ಅವರಿಗೆ ಮೆಹಿದಿ ಹಸನ್ ಮಿರಾಜ್ (33; 50ಎ) ಹೊರತುಪಡಿಸಿ ಉಳಿದವರಿಂದ ಬೆಂಬಲ ಸಿಗಲಿಲ್ಲ. ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದ ಧನಂಜಯ ಡಿಸಿಲ್ವ ಪಂದ್ಯದ ಆಟಗಾರ ಗೌರವ ಪಡೆದರು.

ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಶ್ರೀಲಂಕಾ ತಂಡವು 1–0 ಯಿಂದ ಮುನ್ನಡೆ ಪಡೆದಿದೆ. ಎರಡನೇ ಪಂದ್ಯವು ಚತ್ತೋಗ್ರಾಮ್‌ನಲ್ಲಿ (ಚಿತ್ತಗಾಂಗ್‌) ಮಾರ್ಚ್‌ 30ರಿಂದ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಶ್ರೀಲಂಕಾ 280; ಬಾಂಗ್ಲಾದೇಶ 188; ಎರಡನೇ ಇನಿಂಗ್ಸ್‌: ಶ್ರೀಲಂಕಾ: 418; ಬಾಂಗ್ಲಾದೇಶ: 49.2 ಓವರ್‌ಗಳಲ್ಲಿ 182 (ಮೊಮಿನುಲ್ ಹಕ್ 87, ಮೆಹಿದಿ ಹಸನ್ ಮಿರಾಜ್ 33; ಕಸುನ್ ರೆಜಿತಾ 56ಕ್ಕೆ 5, ವಿಶ್ವ ಫೆರ್ನಾಂಡೊ 36ಕ್ಕೆ 3, ಲಾಹಿರು ಕುಮಾರ 39ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT