ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ವೈರಸ್ ಸೋಂಕು: ಪಾಕ್ ಮಾಜಿ ಕ್ರಿಕೆಟಿಗ

Last Updated 17 ಮಾರ್ಚ್ 2020, 12:08 IST
ಅಕ್ಷರ ಗಾತ್ರ

ಕರಾಚಿ:ಇಂಗ್ಲೆಂಡ್‌ ಕ್ರಿಕೆಟಿಗ ಅಲೆಕ್ಸ್‌ ಹೇಲ್ಸ್‌ ಅವರಲ್ಲಿ ಕೋವಿಡ್–19 ಲಕ್ಷಣಗಳು ಗೋಚರಿಸಿವೆ ಎಂದುಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ರಜೀಜ್‌ ರಾಜಾ ಎಂದು ಹೇಳಿದ್ದಾರೆ.

ಪಿಎಸ್‌ಎಲ್‌ನಲ್ಲಿಕರಾಚಿ ಕಿಂಗ್ಸ್‌ ತಂಡದ ಪರ ಆಡುವ ಅಲೆಕ್ಸ್‌, ಕೊರೊನಾಭೀತಿಯಿಂದಾಗಿ ಆರಂಭದಲ್ಲೇ ಟೂರ್ನಿಯಿಂದ ಹಿಂದೆ ಸರಿದಿದ್ದರು. ಮಾತ್ರವಲ್ಲದೆ, ಹಲವು ವಿದೇಶಿ ಆಟಗಾರರೂ ತಮ್ಮತಮ್ಮ ದೇಶಗಳಿಗೆ ವಾಪಸ್‌ ಆಗಿದ್ದರು.

ಇದೀಗ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಟೂರ್ನಿಯನ್ನು ಅರ್ಧದಲ್ಲೆ ನಿಲ್ಲಿಸಲಾಗಿದೆ. ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಸೆಮಿಫೈನಲ್ಸ್‌ ಹಾಗೂ ಫೈನಲ್‌ ಪಂದ್ಯಗಳಷ್ಟೇ ಬಾಕಿ ಇವೆ. ಈ ಸಂಬಂಧ ರಾಜಾ ಮಾಧ್ಯಮದವರೊಂದಿಗೆ ಮಾತನಾಡಿದರು.

‘ನನಗೆ ತಿಳಿದಿರುವಂತೆ ಅಲೆಕ್ಸ್‌ಇನ್ನೂ ಪರೀಕ್ಷೆಗೆ ಒಳಪಟ್ಟಿಲ್ಲ. ಅವರಲ್ಲಿ ಕಾಣಿಸಿಕೊಂಡಿರುವುದು ಕೊರೊನಾ ವೈರಸ್‌ ಸೋಂಕಿನ ಗುಣಲಕ್ಷಣಗಳೇ ಅಲ್ಲವೇ ಎಂಬುದು ಗೊತ್ತಿಲ್ಲ. ಆದರೆ, ನಾವೆಲ್ಲ ಎಚ್ಚರದಿಂದ ಇರಬೇಕಿದೆ. ಸಮಸ್ಯೆಯ ವಿರುದ್ಧ ಸೆಣಸಲು ಖಂಡಿತವಾಗಿಯೂ ಸಾಮಾನ್ಯ ಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ’ ಎಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಪಿಎಸ್‌ಎಲ್‌ಅನ್ನು ಮುಂದೂಡಿರುವುದು ಒಳ್ಳೆಯ ನಿರ್ಧಾರ ಎಂದು ರಾಜಾ ಅಭಿಪ್ರಾಯಪಟ್ಟರು.

ಪಿಎಸ್‌ನಲ್ಲಿ ಭಾಗವಹಿಸಿರುವ ಒಬ್ಬ ವಿದೇಶೀ ಆಟಗಾರನಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿವೆ ಎಂದು ಪಿಸಿಬಿಯ ಸಿಇಒ ವಾಸೀಂ ಖಾನ್‌ ಅವರೂ ಹೇಳಿದರು. ಆದರೆ, ಖಾನ್‌ ಆಟಗಾರರನ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಆ ಆಟಗಾರ ಇನ್ನೂ ಪಾಕಿಸ್ತಾನದಲ್ಲಿ ಇದ್ದಾರೆಯೇ ಅಥವಾ ತಮ್ಮ ದೇಶಕ್ಕೆ ತೆರಳಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಪಿಎಸ್‌ಎಲ್‌ನಲ್ಲಿ ಭಾಗವಹಿಸಿದ ಎಲ್ಲ ಆಟಗಾರರು, ಪ್ರಾಯೋಜಕರು, ಪ್ರಸಾರಕರನ್ನು ಮುಂಜಾಗ್ರತೆಯಾಗಿಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಖಾನ್‌ ತಿಳಿಸಿದರು.

ಜಗತ್ತಿನಾದ್ಯಂತ ಸುಮಾರು 1.7 ಲಕ್ಷ ಜನರಲ್ಲಿಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ 7,174 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT