ಬೆಂಗಳೂರು: ಪುಣೆಯ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ 13 ರನ್ಗಳ ಮುನ್ನಡೆ ಸಾಧಿಸಿದ್ದ ಮಯಾಂಕ್ ನೇತೃತ್ವದ ತಂಡ ಪ್ರಮುಖ ಮೂರು ಅಂಕ ಗಳಿಸಿದೆ.

ಮೂರನೇ ದಿನದಾಟದಲ್ಲಿ 49.4 ಓವರ್ಗಳಲ್ಲಿ 5 ವಿಕೆಟ್ಗೆ 144 ರನ್ ಗಳಿಸಿದ್ದ ಕರ್ನಾಟಕ ತಂಡದ ಪರವಾಗಿ ನಾಲ್ಕನೇ ದಿನ ಬ್ಯಾಟಿಂಗ್ ಆರಂಭಿಸಿದ ನಾಯಕ ಮಯಾಂಕ್ ಅಗರವಾಲ್ (103 ರನ್, 249 ಎಸೆತ, 4X8 ಹಾಗೂ 6X1) ಅಮೋಘ ಬ್ಯಾಟಿಂಗ್ ಹಾಗೂ ಅಭಿನವ್ ಮನೋಹರ್ (96 ರನ್, 161 ಎಸೆತ, 4X11 ಮತ್ತು 2X6) ರನ್ ಕಲೆಹಾಕುವ ಮೂಲಕ 309\8 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಣೆ ಮಾಡಲಾಯಿತು.

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಸಂಕ್ಷಿಪ್ತ ಸ್ಕೋರ್:

ಮೊದಲ ಇನಿಂಗ್ಸ್: ಕರ್ನಾಟಕ: 111 ಓವರ್ಗಳಲ್ಲಿ 313. ಮಹಾರಾಷ್ಟ್ರ: 99.2 ಓವರ್ಗಳಲ್ಲಿ 300, (ಜಲಜ್ ಸಕ್ಸೆನಾ 72, ರಾಮಕೃಷ್ಣ ಘೋಷ್ 36; ವಿದ್ವತ್ ಕಾವೇರಪ್ಪ 74ಕ್ಕೆ 2, ಶ್ರೇಯಸ್ ಗೋಪಾಲ್ 70ಕ್ಕೆ 4, ಮೊಹ್ಸಿನ್ ಖಾನ್ 64ಕ್ಕೆ 3). ಎರಡನೇ ಇನಿಂಗ್ಸ್: ಕರ್ನಾಟಕ: 110 ಓವರ್ಗಳಲ್ಲಿ 8 ವಿಕೆಟ್ಗೆ 309 (ಮಯಂಕ್ ಅಗರವಾಲ್ 103, ಅಭಿನವ್ ಮನೋಹರ್ 96; ಮುಕೇಶ್ ಚೌಧರಿ 70ಕ್ಕೆ 3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.