ಪುಣೆ: ಶ್ರೇಯಸ್ ಗೋಪಾಲ್ ಆಲ್ರೌಂಡ್ ಆಟದ ಬಲದಿಂದ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 13 ರನ್ಗಳ ಅಲ್ಪ ಮುನ್ನಡೆ ಸಾಧಿಸಿದೆ. ಎರಡನೇ ಇನಿಂಗ್ಸ್ನಲ್ಲಿ ನಾಯಕ ಮಯಾಂಕ್ ಅಗರವಾಲ್ ತಂಡಕ್ಕೆ ಆಸರೆಯಾಗಿದ್ದಾರೆ.

ಎರಡನೇ ದಿನದಾಟದ ಅಂತ್ಯಕ್ಕೆ 200 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಮಹಾರಾಷ್ಟ್ರ ತಂಡದ ಪರ ಮೂರನೇ ದಿನ ಜಲಜ್ ಸಕ್ಸೇನಾ (72: 126 ಎಸೆತ) ದಿಟ್ಟ ಹೋರಾಟದ ನೆರವಿನಿಂದ 300 ರನ್ ಕಲೆಹಾಕಿತು. ಆ ಮೂಲಕ ಕರ್ನಾಟಕ ತಂಡ 13 ರನ್ಗಳ ಅಲ್ಪ ಮುನ್ನಡೆ ಸಾಧಿಸಿತು.

ಕರ್ನಾಟಕದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಶ್ರೇಯಸ್ ಗೋಪಾಲ್ (25–5–70–4), ಮೋಹ್ಸಿನ್ ಖಾನ್ (31.2–4–64–3) ಹಾಗೂ ವಿದ್ವತ್ ಕಾವೇರಪ್ಪ (18–0–74–2) ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದರು.

13 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ತೀವ್ರ ಕುಸಿತ ಅನುಭವಿಸಿತು. ದಿನದಾಟದ ಅಂತ್ಯಕ್ಕೆ 144\5 ವಿಕೆಟ್ ಕಳೆದುಕೊಂಡಿದೆ. ಮೂರನೇ ದಿನದಾಟದಲ್ಲಿ ನಾಯಕ ಮಯಾಂಕ್ ಅಗರವಾಲ್ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್ ದೊಡ್ಡ ಮೊತ್ತದ ರನ್ ಕಲೆಹಾಕುವಲ್ಲಿ ವಿಫಲರಾದರು.

ಎರಡನೇ ಇನಿಂಗ್ಸ್ನಲ್ಲಿ ಕರ್ನಾಟದ ಪರ ಅನೀಶ್ (17 ರನ್), ಕೃಷ್ಣಪ್ಪ ಶ್ರೀಜಿತ್ (29 ರನ್), ಕರುಣ್ ನಾಯರ್ (15 ರನ್), ಸ್ಮರಣ್ ರವಿಚಂದ್ರನ್ (4 ರನ್) ಹಾಗೂ ಅಭಿಲಾಶ್ ಶೆಟ್ಟಿ (4ರನ್) ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ, ಏಕಾಂಗಿ ಹೋರಾಟ ನಡೆಸುತ್ತಿರುವ ನಾಯಕ ಮಯಾಂಕ್ ಅಗರವಾಲ್ (64: 145 ಎ, 4X6) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.