ಹುಬ್ಬಳ್ಳಿ: ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಇಲ್ಲಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಶನಿವಾರ ಸೂರ್ಯನ ಪ್ರಖರತೆ ಇರಲಿಲ್ಲ. ಆದರೆ, ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ ಜೋಡಿಯ ಅಬ್ಬರದ ಆಟದ ಮೂಲಕ ಫಳ ಫಳ ಹೊಳೆದರು.

ಏಳು ರನ್ಗಳಿಂದ ದ್ವಿಶತಕ ವಂಚಿತರಾದ ದೇವದತ್ತ ಮತ್ತು ಮನೀಷ್ ಅವರ ಆಕರ್ಷಕ ಶತಕದ ನೆರವಿನಿಂದ ಕರ್ನಾಟಕ, ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಂಜಾಬ್ ಮೇಲೆ 309 ರನ್ಗಳ ಬೃಹತ್ ಮುನ್ನಡೆ ಗಳಿಸಿತು.

ಮೂರು ವಿಕೆಟ್ಗೆ 142 ರನ್ಗಳಿಂದ ಶನಿವಾರ ಆಟ ಮುಂದುವರಿಸಿದ ಕರ್ನಾಟಕ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 123 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 461 ರನ್ ಗಳಿಸಿದ್ದು ಗೆಲುವಿನ ಅವಕಾಶ ಹೊಂದಿದೆ.

ದೇವದತ್ತ ಮತ್ತು ಮನೀಷ್ ಜೋಡಿ ಊಟದ ವಿರಾಮದವರೆಗೂ ಪಂಜಾಬ್ ಬೌಲರ್ಗಳ ಬೆವರಿಳಿಸಿತು. ಈ ಜೋಡಿ ಸ್ಪಿನ್ನರ್, ವೇಗಿಗಳನ್ನು ಲೀಲಾಜಾಲವಾಗಿ ಎದುರಿಸಿತು.

ಪಂಜಾಬ್ ತಂಡದ ನಾಯಕ ಮನದೀಪ್ ಅವರು ಬೌಲಿಂಗ್ನಲ್ಲಿ ಮಾಡಿದ ಯಾವ ಬದಲಾವಣೆಯೂ ಫಲಿಸಲಿಲ್ಲ.

ವೇಗದ ಆಟಕ್ಕೆ ಒತ್ತು ನೀಡಿದ ದೇವದತ್ತ, ವೇಗಿ ಬಲ್ತೇಜ್ ಸಿಂಗ್ ಎಸೆದ ಇನಿಂಗ್ಸ್ನ 42ನೇ ಓವರ್ನ ಎರಡನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿ, 102 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರಿಗೆ ಮೂರನೇ ಶತಕ. ನಂತರ 150ರ ಗಡಿ ದಾಟಲು ಕೇವಲ 68 ಎಸೆತ ತೆಗೆದುಕೊಂಡರು.

ಇವರಿಗೆ ಸೂಕ್ತ ಸಾಥ್ ನೀಡಿದ ಅನುಭವಿ ಮನೀಷ್, ಆಕರ್ಷಕ ಪುಲ್ ಹೊಡೆತ, ಕವರ್ ಡ್ರೈವ್ಗಳ ಮೂಲಕ ಮಿಂಚಿದರು.

ಎಡಗೈ ಸ್ಪಿನ್ನರ್ ಪ್ರೇರಿತ್ ಎಸೆದ 76ನೇ ಓವರ್ನ ಎರಡನೇ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ಅವರು, ನಂತರ ಎಸೆತದಲ್ಲಿ ಚುರುಕಿನ ಒಂದು ರನ್ ಗಳಿಸಿ ಶತಕ ಗಳಿಸಿದರು.

ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 24ನೇ ಶತಕ.

ದ್ವಿಶತಕದ ಸನಿಹದಲ್ಲಿದ್ದ ದೇವದತ್ತ, ಪ್ರೇರಿತ್ ದತ್ತಾ ಎಸೆತವನ್ನು ಎಕ್ಸ್ಟ್ರಾ ಕವರ್ನಲ್ಲಿ ಬಾರಿಸಿದರು. ಚೆಂಡು ನೇರವಾಗಿ ಬಲ್ತೇಜ್ ಸಿಂಗ್ ಕೈಸೇರಿತು. ಅವರು 193 (216ಎ, 4x24, 6x4) ರನ್ ಗಳಿಸಿ ಇನಿಂಗ್ಸ್ ಮುಗಿಸಿದರು. ಮನೀಷ್ (118; (165ಎ, 4X13, 6x3) ಅರ್ಷದೀಪ್ ಬೌಲಿಂಗ್ನಲ್ಲಿ ಎರಡನೇ ಸ್ಲಿಪ್ನಲ್ಲಿದ್ದ ಅಭಿಷೇಕ್ ಶರ್ಮಾ ಹಿಡಿದ ಆಕರ್ಷಕ ಕ್ಯಾಚ್ಗೆ ನಿರ್ಗಮಿಸಿದರು.

ದೇವದತ್ತ ಮತ್ತು ಮನೀಷ್ ಜೋಡಿ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 234 (295ಎ) ರನ್ ಗಳಿಸಿದರು. ತಾಳ್ಮೆಯ ಅಟವಾಡಿದ ಎಸ್.ಶರತ್ ಅರ್ಧಶತಕ (55; 158ಎ, 4x5) ಗಳಿಸಿ ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸಿದರು. ಅವರು ಶುಭಾಂಗ್ ಹೆಗಡೆ (27) ಜತೆ ಆರನೇ ವಿಕೆಟ್ ಜತೆಯಾಟದಲ್ಲಿ 59 ರನ್ (174) ಸೇರಿಸಿ, ತಂಡ ಕುಸಿಯಂತೆ ತಡೆದರು. ದಿನದಾಟದ ಅಂತ್ಯಕ್ಕೆ ಶರತ್ ಜತೆ ವೈಶಾಖ್ ವಿಜಯಕುಮಾರ್ (15) ಕ್ರೀಸ್ನಲ್ಲಿದ್ದರು.

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶತಕ ಗಳಿಸುವುದು ಸ್ಮರಣೀಯವಾದದ್ದು. ದ್ವಿಶತಕ ಕೈತಪ್ಪಿದ್ದಕ್ಕೆ ಬೇಸರವಿದೆ.

-ದೇವದತ್ತ ಪಡಿಕ್ಕಲ್, ಕರ್ನಾಟಕ ತಂಡದ ಬ್ಯಾಟರ್

ಸ್ಕೋರ್ ಕಾರ್ಡ್

ಮೊದಲ ಇನಿಂಗ್ಸ್: ಪಂಜಾಬ್ 152 (46.5 ಓವರ್)

ಕರ್ನಾಟಕ: 6ಕ್ಕೆ 461 (123 ಓವರ್)

(ಶುಕ್ರವಾರ: 33 ಓವರ್ಗಳಲ್ಲಿ 3ಕ್ಕೆ142)

ದೇವದತ್ತ ಸಿ ಬಲ್ತೇಜ್ ಬಿ ಪ್ರೇರಿತ್ 193 (216ಎ, 4X24, 6X4)

ಮನೀಷ್ ಸಿ ಅಭಿಷೇಕ್ ಬಿ ಅರ್ಷದೀಪ್ 118 (165ಎ, 4X13. 6x3)

ಶರತ್ ಔಟಾಗದೆ 55 (158ಎ, 4x5)

ಶುಭಾಂಗ್ ಸಿ ಮನದೀಪ್ ಬಿ ನಮನ್ 27 (77ಎ, 4x2)

ವೈಶಾಕ್ ಔಟಾಗದೆ 15 (27ಎ, 4x3)

ಇತರೆ: 7 (ಲೆಗ್ಬೈ 6, ನೋಬಾಲ್ 1)

ವಿಕೆಟ್ ಪತನ: 4–344 (ದೇವದತ್ತ; 75.4), 5–382 (ಮನೀಷ್ ಪಾಂಡೆ 87.3), 6–441 (ಶುಭಾಂಗ್ ಹೆಗಡೆ, 116.3)

ಬೌಲಿಂಗ್: ಬಲ್ತೇಜ್ ಸಿಂಗ್ 21–3–56–0, ಅರ್ಷದೀಪ್ ಸಿಂಗ್ 21–1–71–2 , ಸಿದ್ಧಾರ್ಥ್ ಕೌಲ್ 18–0–79–0, ಪ್ರೇರಿತ್ ದತ್ತಾ 22–1–84–2, ನಮನ್ ಧೀರ್ 12–1–46–2, ಮಯಂಕ್ ಮಾರ್ಕಂಡೆ 20–1–73–0, ಅಭಿಷೇಕ್ ಶರ್ಮಾ 9–0–46–0.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.