ಬೆಂಗಳೂರು: ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಮಂಗಳವಾರ ಪ್ರಕಟಿಸಿದ ರಣಜಿ ಟ್ರೋಫಿ ಟೂರ್ನಿಯ ಸಂಭವನೀಯರ ತಂಡದಲ್ಲಿ ಸ್ಥಾನ ನೀಡಿಲ್ಲ. ಹೀಗಾಗಿ, 36 ವರ್ಷದ ಪಾಂಡೆ ಅವರ ಕ್ರಿಕೆಟ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಮಾಜಿ ಸ್ಪಿನ್ನರ್ ಆನಂದ್ ಕಟ್ಟಿ ನೇತೃತ್ವದ ಹೊಸ ಆಯ್ಕೆ ಸಮಿತಿಯು 2025–26ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ 37 ಆಟಗಾರರ ಸಂಭವನೀಯರ ತಂಡವನ್ನು ಪ್ರಕಟಿಸಿದೆ.

2013-14 ಮತ್ತು 2014-15ರಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕ ತಂಡದ ಭಾಗವಾಗಿದ್ದ ಪಾಂಡೆ ಅವರು 2024ರ ನವೆಂಬರ್ನಲ್ಲಿ ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಗುಂಪು ಹಂತದ ಪಂದ್ಯದಲ್ಲಿ ಕೊನೆಯ ಬಾರಿ ರಾಜ್ಯ ತಂಡಕ್ಕೆ ಆಡಿದ್ದರು.

ವಿದರ್ಭ ತಂಡವನ್ನು ತೊರೆದ ಕರುಣ್ ನಾಯರ್ ನಿರೀಕ್ಷೆಯಂತೆ ಮತ್ತೆ ತಂಡಕ್ಕೆ ಮರಳಿದ್ದಾರೆ. ಕಳೆದ ಋತುವಿನಲ್ಲಿ ತ್ರಿಪುರ ಪರ ಆಡಿದ್ದ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಕೂಡ ಸಂಭವನೀಯರ ಪಟ್ಟಿಯಲ್ಲಿದ್ದಾರೆ.

ಸಂಭವನೀಯ ಆಟಗಾರ ಪಟ್ಟಿ: ಮಯಂಕ್ ಅಗರವಾಲ್, ಕೆ.ಎಲ್.ರಾಹುಲ್, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಆರ್.ಸ್ಮರಣ್, ಕೆ.ಎಲ್.ಶ್ರೀಜಿತ್ (ವಿಕೆಟ್ ಕೀಪರ್), ಕೆ.ವಿ. ಅನೀಶ್, ಅಭಿನವ್ ಮನೋಹರ್, ನಿಕಿನ್ ಜೋಸ್, ಪ್ರಸಿದ್ಧ ಕೃಷ್ಣ, ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್, ಮೆಕ್ನೀಲ್ ಎಚ್. ನೊರೊನ್ಹಾ, ವಿದ್ಯಾಧರ ಪಾಟೀಲ, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್, ಅಭಿಲಾಷ್ ಶೆಟ್ಟಿ, ಪರಾಸ್ ಗುರುಬಕ್ಷ ಆರ್ಯ, ಶಶಿಕುಮಾರ್ ಕೆ., ವೆಂಕಟೇಶ್ ಎಂ, ಯಶೋವರ್ಧನ್ ಪರಂತಾಪ್, ಸಮರ್ಥ್ ನಾಗರಾಜ್, ಮಾಧವ ಪಿ.ಬಜಾಜ್, ಶ್ರೀಶ ಎಸ್.ಆಚಾರ್, ಅಭಿಷೇಕ್ ಅಹ್ಲಾವತ್, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಕಿಶನ್ ಎಸ್. ಬೆದರೆ, ಮನ್ವಂತ್ ಕುಮಾರ್ ಎಲ್., ಕಾರ್ತಿಕೇಯ ಕೆ.ಪಿ, ಮೋನಿಶ್ ರೆಡ್ಡಿ, ಶುಭಾಂಗ್ ಹೆಗ್ಡೆ, ಅಧೋಕ್ಷ್ ಹೆಗ್ಡೆ, ಕುಮಾರ್ ಎಲ್.ಆರ್, ಶರತ್ ಬಿ.ಆರ್. (ವಿಕೆಟ್ ಕೀಪರ್).

ಯರೇಗೌಡ (ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ ಮೋಹನ್ (ಫೀಲ್ಡಿಂಗ್ ಕೋಚ್), ಎ.ರಮೇಶ್ ರಾವ್ (ಮ್ಯಾನೇಜರ್).

ಆಯ್ಕೆ ಸಮಿತಿಗೆ ಆನಂದ್ ಕಟ್ಟಿ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ವಿವಿಧ ಆಯ್ಕೆ ಸಮಿತಿಗಳ ಅಧ್ಯಕ್ಷರ ಮತ್ತು ಸದಸ್ಯರ ವಿವರವನ್ನು ಮಂಗಳವಾರ ಪ್ರಕಟಿಸಿದೆ. ಈ ಸಮಿತಿಗಳ ಸದಸ್ಯರು ಕಳೆದ ಮೂರು ತಿಂಗಳಿನಿಂದ ಕರ್ತವ್ಯ
ನಿರ್ವಹಿಸುತ್ತಿದ್ದಾರೆ.

ಸೀನಿಯರ್ ಪುರುಷರ ತಂಡ ಆಯ್ಕೆ ಸಮಿತಿಗೆ ಮಾಜಿ ರಣಜಿ ಆಟಗಾರ ಆನಂದ್ ಕಟ್ಟಿ ಅಧ್ಯಕ್ಷರಾಗಿದ್ದಾರೆ. ಮಾಜಿ ಆಟಗಾರರಾದ ಸಿ.ರಘು, ಅಮಿತ್ ವರ್ಮಾ ಮತ್ತು ತೇಜಪಾಲ್ ಕೊಟ್ಟಾರಿ ಸಮಿತಿ ಸದಸ್ಯರಾಗಿದ್ದಾರೆ.

ಸೀನಿಯರ್ ಪುರುಷರ ಆಯ್ಕೆ ಸಮಿತಿ: ಅಧ್ಯಕ್ಷ: ಆನಂದ್ ಕಟ್ಟಿ. ಸದಸ್ಯರು: ಸಿ.ರಘು, ಅಮಿತ್ ವರ್ಮಾ ಮತ್ತು ತೇಜಪಾಲ್ ಕೊಟ್ಟಾರಿ.

23 ವರ್ಷದೊಳಗಿನ ಪುರುಷರ ಆಯ್ಕೆ ಸಮಿತಿ: ಅಧ್ಯಕ್ಷ: ಕೆ.ಎಲ್. ಅಶ್ವತ್ಥ್. ಸದಸ್ಯರು: ಅಮಿತ್ ವರ್ಮಾ, ಸುನಿಲ್ ರಾಜು ಮತ್ತು ಎಸ್.ಪ್ರಕಾಶ್.

ಸೀನಿಯರ್ ಮತ್ತು 23 ವರ್ಷದೊಳಗಿನ ಮಹಿಳೆಯರ ಆಯ್ಜೆ ಸಮಿತಿ: ಅಧ್ಯಕ್ಷೆ: ಸುನೀತಾ ಅನಂತಕೃಷ್ಣನ್. ಸದಸ್ಯರು: ಅರುಣಾ ರೆಡ್ಡಿ, ನಿವೇದಿತಾ ರೇಷ್ಮೆ
ಮತ್ತು ಮುಕ್ತಾ ಅಲಗೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.