ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಐದು ವರ್ಷಗಳ ಹಿಂದೆ ಏ.23ರಂದೇ ಆರ್‌ಸಿಬಿ 49 ರನ್ನಿಗೆ ಆಲೌಟ್!

Last Updated 23 ಏಪ್ರಿಲ್ 2022, 16:03 IST
ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 68 ರನ್ನಿಗೆ ಆಲೌಟ್ ಆಗುವ ಮೂಲಕ ಭಾರಿ ಮುಖಭಂಗಕ್ಕೊಳಗಾಗಿದೆ.

ಟೂರ್ನಿಯಲ್ಲಿ ಇದುವರೆಗೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಬೆಂಗಳೂರು ಬ್ಯಾಟರ್‌ಗಳು ಏಕಾಏಕಿ ವೈಫಲ್ಯ ಅನುಭವಿಸಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಆರನೇ ಕನಿಷ್ಠ ಮೊತ್ತಕ್ಕೆ ಆಲೌಟ್ ಆಯಿತು. ಅಂದಿನ ಈ ದಿನದಂದೇ (2017, ಏಪ್ರಿಲ್ 23) ಆರ್‌ಸಿಬಿ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 49 ರನ್ನಿಗೆ ಆಲೌಟ್ ಆಗಿರುವುದು ಇದುವರೆಗಿನ ಕೆಟ್ಟ ಸಾಧನೆಯಾಗಿದೆ. ಈಗ ಐದು ವರ್ಷಗಳ ಹಿಂದಿನ ಕಹಿ ಅನುಭವ ಮರುಕಳಿಸಿದೆ.

ಐಪಿಎಲ್‌ನಲ್ಲಿ ಕನಿಷ್ಠ ಮೊತ್ತ ಗಳಿಸಿದ ತಂಡಗಳು:
ಆರ್‌ಸಿಬಿ - 49 ರನ್, ಕೋಲ್ಕತ್ತ ವಿರುದ್ಧ, 2017
ರಾಜಸ್ಥಾನ್ - 58 ರನ್, ಆರ್‌ಸಿಬಿ ವಿರುದ್ಧ, 2009
ಡೆಲ್ಲಿ - 66 ರನ್, ಮುಂಬೈ ವಿರುದ್ಧ, 2017
ಡೆಲ್ಲಿ - 67 ರನ್, ಪಂಜಾಬ್ ವಿರುದ್ಧ, 2017
ಕೋಲ್ಕತ್ತ - 67 ರನ್, ಮುಂಬೈ ವಿರುದ್ಧ, 2008
ಆರ್‌ಸಿಬಿ - 68 ರನ್, ಹೈದರಾಬಾದ್ ವಿರುದ್ಧ, 2022

ಒಟ್ಟಾರೆಯಾಗಿ ಐಪಿಎಲ್‌ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (9 ಬಾರಿ) ಬಳಿಕ ಆರ್‌ಸಿಬಿ ಎಂಟನೇ ಸಲ 100ಕ್ಕೂ ಕಡಿಮೆ ರನ್ನಿಗೆ ಆಲೌಟ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT