ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL–2023 | ಮುಂಬೈ ಎದುರು ಆರ್‌ಸಿಬಿ ಬ್ಯಾಟಿಂಗ್; ಸ್ಮೃತಿ ಪಡೆಗೆ ಮೊದಲ ಜಯದ ತವಕ

Last Updated 6 ಮಾರ್ಚ್ 2023, 16:21 IST
ಅಕ್ಷರ ಗಾತ್ರ

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಇಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿದಿದೆ.

ಇಲ್ಲಿನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆರ್‌ಸಿಬಿ ತಂಡ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಮುಂಬೈ ಶನಿವಾರ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ಪಡೆಯನ್ನು 143 ರನ್‌ ಅಂತರದಿಂದ ಮಣಿಸಿದ್ದು, ಮತ್ತೊಂದು ಜಯದ ವಿಶ್ವಾಸದಲ್ಲಿದೆ. ಇತ್ತ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ಸೋಮವಾರ ಡೆಲ್ಲಿ ವಿರುದ್ಧ 60 ರನ್‌ ಅಂತರದಿಂದ ಸೋಲು ಕಂಡಿದ್ದು, ಜಯದ ಹಳಿಗೆ ಮರಳುವ ಯೋಜನೆಯಲ್ಲಿದೆ.

ಆಡುವ ಹನ್ನೊಂದರ ಬಳಗ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಸ್ಮೃತಿ ಮಂದಾನ (ನಾಯಕಿ), ರಿಚಾ ಘೋಷ್‌, ಹೆಥರ್ ನೈಟ್‌, ಎಲೈಸ್‌ ಪೆರಿ, ಮೇಗನ್‌ ಶುಟ್‌, ಸೋಫಿ ಡಿವೈನ್‌, ರೇಣುಕಾ ಠಾಕೂರ್‌, ಕನಿಖಾ ಅಹುಜಾ, ಪ್ರೀತಿ ಬೋಸ್‌, ಶ್ರೇಯಾಂಕಾ ಪಾಟಿಲ್‌, ದಿಶಾ ಕಾಸತ್‌

ಮುಂಬೈ ಇಂಡಿಯನ್ಸ್‌: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಯಸ್ತಿಕಾ ಭಾಟಿಯಾ, ಹೀಲಿ ಮ್ಯಾಥ್ಯೂಸ್‌, ಸ್ಕೀವರ್‌ ಬ್ರಂಟ್, ಅಮೇಲಿಯಾ ಕರ್ರ್‌, ಇಸ್ಸಿ ವಾಂಗ್‌, ಅಮನ್‌ಜೋತ್‌ ಕೌರ್‌, ಪೂಜಾ ವಸ್ತ್ರಾಕರ್‌, ಹುಮಾರಿಯಾ ಕಾಝಿ, ಜಿಂತಿಮನಿ ಕಲಿತಾ, ಸೈಕಾ ಇಷಕ್ಯೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT