ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಮೊದಲ ಟಿ20 ವಿಶ್ವಕಪ್ ಟೂರ್ನಿ ಚುಟುಕು ಕ್ರಿಕೆಟ್‌ಗೆ ಭದ್ರ ಬುನಾದಿ ಒದಗಿಸಿತು. ಮರು ವರ್ಷ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿ ಈ ಮಾದರಿಗೆ ಇನ್ನಷ್ಟು ಉತ್ತೇಜನ ದೊರಕಿತು. 2009ರಲ್ಲಿ ನಡೆದ ಎರಡನೇ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯವನ್ನು ಕ್ರಿಕೆಟ್ ಜನಕ ಇಂಗ್ಲೆಂಡ್ ವಹಿಸಿತು.

ಮೊದಲ ಆವೃತ್ತಿಯ ಫೈನಲ್ ತಲುಪಿದ್ದ ಪಾಕಿಸ್ತಾನ ತಂಡ ನಂತರದ ಅವಧಿಯಲ್ಲಿ ವಿವಿಧ ಸಮಸ್ಯೆಗಳನ್ನು ಎದುರಿಸಿತ್ತು. ಈ ವಿಶ್ವಕಪ್‌ಗೆ ಮೂರು ತಿಂಗಳು ಮೊದಲು ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಆರು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದರು. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಅನುಭವಿಸಿದ 48 ರನ್‌ಗಳ ಮುಖಭಂಗದಿಂದ ಯೂನಿಸ್ ಖಾನ್ ಪಡೆಯ ಮೇಲೆ ಯಾರಿಗೂ ಭರವಸೆಯಿರಲಿಲ್ಲ.

ಆದರೆ ತಂಡ ನಿರ್ಣಾಯಕ ಹಂತದಲ್ಲಿ ಹಳಿಗೆ ಮರಳಿತು. ಪ್ರಶಸ್ತಿ ಗೆದ್ದು ಅಚ್ಚರಿ ಮೂಡಿಸಿತು. ಅನುಭವಿ ಆಲ್‌ರೌಂಡರ್ ಶಾಹೀದ್ ಅಫ್ರಿದಿ, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಹೊಡೆದರು. ವಿಕೆಟ್‌ಗಳನ್ನೂ ಪಡೆದರು. ತಂಡ 17 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದುಕೊಂಡಿತ್ತು!

ಪ್ರಮುಖ ಅಂಶಗಳು

l ಮೊದಲ ಆವೃತ್ತಿಯ ಚಾಂಪಿಯನ್ ಭಾರತ ನಿರೀಕ್ಷೆಯಂತೆ ಮೂರು ತಂಡಗಳ ‘ಎ’ ಗುಂಪಿನಿಂದ ಸೂಪರ್ ಎಂಟು ಹಂತಕ್ಕೆ ತಲುಪಿತು. ಆದರೆ ಅಚ್ಚರಿಯೆಂಬಂತೆ ಎಂ.ಎಸ್.ಧೋನಿ ಬಳಗ ಈ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಸೋಲನುಭವಿಸಿತು.

l ಸೂಪರ್ 12ರ ಹಂತದಲ್ಲಿ ಎರಡು ಪಂದ್ಯ ಸೋತು ಹೊರಬಿದ್ದ ಆಸ್ಟ್ರೇಲಿಯಾ

l ಲಾರ್ಡ್ಸ್‌ನಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ‘ಕ್ರಿಕೆಟ್ ಕೂಸು’ ನೆದರ್ಲೆಂಡ್ಸ್, ಆತಿಥೇಯ ಇಂಗ್ಲೆಂಡ್ ತಂಡದ ಮೇಲೆ ಕೊನೆಯ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಪಡೆದಿದ್ದು ಟೂರ್ನಿಗೆ ಅಚ್ಚರಿಯ ಆರಂಭ ನೀಡಿತು.

l ಫೈನಲ್‌ನಲ್ಲಿ ಮೊದಲು ಆಡಿದ ಶ್ರೀಲಂಕಾ 6 ವಿಕೆಟ್‌ಗೆ 138 ರನ್ ಗಳಿಸಿತು. ಬೌಲಿಂಗ್‌ನಲ್ಲಿ 4 ಓವರುಗಳಲ್ಲಿ 20 ರನ್ನಿತ್ತು 1 ವಿಕೆಟ್ ಪಡೆದಿದ್ದ ಶಾಹಿದ್ ಅಫ್ರಿದಿ ಅಜೇಯ 54 ರನ್ ಗಳಿಸಿ ಫೈನಲ್‌ನಲ್ಲಿ ಪಾಕಿಸ್ತಾನ ಎಂಟು ವಿಕೆಟ್‌ಗಳ ಜಯ ಪಡೆಯಲು ನೆರವಾದರು.

ಎರಡನೇ ವಿಶ್ವಕಪ್: 2009

lಆತಿಥ್ಯ: ಇಂಗ್ಲೆಂಡ್

lವಿಜೇತ ತಂಡ: ಪಾಕಿಸ್ತಾನ

lರನ್ನರ್ ಅಪ್: ಶ್ರೀಲಂಕಾ

lಸ್ಪರ್ಧಿಸಿದ ತಂಡಗಳು: 12

lಪಂದ್ಯಗಳು: 27

lಸರಣಿ ಶ್ರೇಷ್ಠ: ತಿಲಕರತ್ನೆ ದಿಲ್ಶನ್ (ಶ್ರೀಲಂಕಾ)

lಶ್ರೇಷ್ಠ ಬ್ಯಾಟರ್: ತಿಲಕರತ್ನೆ ದಿಲ್ಶನ್ (317 ರನ್)

lಶ್ರೇಷ್ಠ ಬೌಲರ್: ಉಮರ್ ಗುಲ್ (ಪಾಕಿಸ್ತಾನ, 13 ವಿಕೆಟ್), ಸತತ ಎರಡನೇ ಸಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.