ಮುಂಬೈ: ಗುಜರಾತ್ ಟೈಟನ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ ಅವಧಿಯೊಳಗೆ ಓವರ್ಗಳನ್ನು ಪೂರೈಸದ ಕಾರಣಕ್ಕೆ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ₹24 ಲಕ್ಷ ದಂಡ ವಿಧಿಸಲಾಗಿದೆ.

ಇದರೊಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ 58 ರನ್ ಅಂತರದ ಸೋಲಿಗೆ ಶರಣಾಗಿತ್ತು.

ಈ ಋತುವಿಯಲ್ಲಿ ರಾಜಸ್ಥಾನ ತಂಡವು ಎರಡನೇ ಸಲ ಈ ತಪ್ಪು ಮಾಡಿರುವ ಕಾರಣ 2.2 ಕಲಮಿನಡಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಇಂಪ್ಯಾಕ್ಟ್ ಆಟಗಾರ ಸೇರಿದಂತೆ ತಂಡದ ಆಡುವ ಹನ್ನೊಂದರ ಬಳಗದ ಇತರೆ ಆಟಗಾರರ ಮೇಲೆ ₹6 ಲಕ್ಷ ಅಥವಾ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದೆ. ಇದರಲ್ಲಿ ಯಾವುದು ಕಡಿಮೆಯೋ ಅದು ಅನ್ವಯವಾಗುತ್ತದೆ ಎಂದು ಹೇಳಿದೆ.

ಏಳನೇ ಸ್ಥಾನಕ್ಕೆ ಕುಸಿದ ರಾಜಸ್ಥಾನ...

ಏತನ್ಮಧ್ಯೆ ಗುಜರಾತ್ ವಿರುದ್ಧ ಸೋಲನುಭವಿಸಿರುವ ರಾಜಸ್ಥಾನ, ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಈ ವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ನಾಲ್ಕು ಅಂಕಗಳನ್ನು ಮಾತ್ರ ಹೊಂದಿದೆ.
.IPL 2025: ಸುದರ್ಶನ್-ಪ್ರಸಿದ್ಧ ಕೃಷ್ಣ ಬಲ; ಟೈಟನ್ಸ್ಗೆ ನಾಲ್ಕನೇ ಜಯ .IPL 2025 | ನಿಧಾನಗತಿ ಓವರ್: ಪಾಟೀದಾರ್ಗೆ ದಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.