ನವದೆಹಲಿ: ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಅವರುಆಸ್ಟ್ರೇಲಿಯಾ ವಿರುದ್ಧ ಮುಂದಿನ ತಿಂಗಳು ಆರಂಭವಾಗಲಿರುವ ಟೆಸ್ಟ್ ಸರಣಿಗೆ ಲಭ್ಯವಾಗುವುದು ಅನುಮಾನವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ರೈಸರ್ಸ್ ತಂಡದ ಪರ ಆಡುತ್ತಿದ್ದ ಸಹಾ, ಗಾಯಗೊಂಡ ಹಿನ್ನೆಲೆಯಲ್ಲಿ ಡೆಲ್ಲಿಕ್ಯಾಪಿಟಲ್ಸ್ ವಿರುದ್ಧದ ಪ್ಲೇ ಆಫ್ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಯುನೈಟೆಡ್ ಅರಬ್ ಎಮಿರೇಟ್ಸ್ನ ಅಬುಧಾಬಿಯಲ್ಲಿ ಭಾನುವಾರ ನಡೆದ ಈ ಹಣಾಹಣಿಯಲ್ಲಿ ಹೈದರಾಬಾದ್ ತಂಡ 17 ರನ್ಗಳಿಂದ ಡೆಲ್ಲಿ ಎದುರು ಸೋತಿತ್ತು.

ಭಾರತ ತಂಡದಲ್ಲಿ ತಾಂತ್ರಿಕವಾಗಿ ಶ್ರೇಷ್ಠ ವಿಕೆಟ್ಕೀಪರ್ ಎಂದು ಪರಿಗಣಿಸಲಾಗುವ ಸಹಾ ಹಾಗೂ ತಂಡದ ಎರಡನೇ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರು ಆಸ್ಟ್ರೇಲಿಯಾದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಸ್ಥಾನ ಪಡೆದಿದ್ದಾರೆ.

ತಮಗಾಗಿರುವ ಗಾಯದ ಕುರಿತು ಸಹಾ ಪ್ರತಿಕ್ರಿಯಿಸಿಲ್ಲ.

ಈ ತಿಂಗಳ ಅಂತ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಡಿಸೆಂಬರ್ 17ರಿಂದ ಅಡಿಲೇಡ್ನಲ್ಲಿ ಆರಂಭವಾಗುವ ಟೆಸ್ಟ್ ಸರಣಿಗೂ ಮೊದಲು ಏಕದಿನ ಹಾಗೂ ಟ್ವೆಂಟಿ ಪಂದ್ಯಗಳಲ್ಲಿ ಆತಿಥೇಯ ತಂಡವನ್ನು ಭಾರತ ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.